ದೇಶ

ನಮಗೆ ಪಕ್ಷವೇ ಕುಟುಂಬ, ಆದರೆ ಕೆಲವರಿಗೆ ಕುಟುಂಬವೇ ಪಕ್ಷ: ಪ್ರಿಯಾಂಕ ರಾಜಕೀಯ ಪ್ರವೇಶದ ಬಗ್ಗೆ ಮೋದಿ

Srinivas Rao BV
ನವದೆಹಲಿ: ಪ್ರಿಯಾಂಕ ವಾಧ್ರ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವುದರ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡಾ ಈ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ.  
ಮಹಾರಾಷ್ಟ್ರದ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಒಂದು ಕುಟುಂಬವನ್ನು ಆಧರಿಸಿ ಬಿಜೆಪಿಯಲ್ಲಿ ಯಾವುದೇ ನಿರ್ಧಾರಗಳನ್ನೂ ಕೈಗೊಳ್ಳಲಾಗಿಲ್ಲ. ಯಾರು ಯಾವ ಕುಟುಂಬದವರು ಎಂಬುದನ್ನು ಆಧರಿಸಿ ನಮ್ಮ ಪಕ್ಷದಲ್ಲಿ ನಿರ್ಧಾರ ಕೈಗೊಳ್ಳಲಾಗುವುದಿಲ್ಲ. ಆದ್ದರಿಂದಲೇ ಬಿಜೆಪಿಯಲ್ಲಿ ಪಕ್ಷವೇ ಕುಟುಂಬ ಎಂದು ಹೇಳಲಾಗುತ್ತದೆ ಆದರೆ ಕೆಲವರಿಗೆ ಕುಟುಂಬವೇ ಪಕ್ಷದಲ್ಲಿರುತ್ತದೆ ಎಂದು ಮೋದಿ ಪ್ರಿಯಾಂಕ ವಾಧ್ರ ರಾಜಕೀಯ ಪ್ರವೇಶದ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 
ಮುಂದುವರೆದು ಮಾತನಾಡಿರುವ ಪ್ರಧಾನಿ ಮೋದಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪಾಲನೆ ಮಾಡುವ ಪಕ್ಷವೆಂದರೆ ಅದು ಬಿಜೆಪಿ ಮಾತ್ರ, ಬಿಜೆಪಿ ಕಾರ್ಯಕರ್ತರ ಪಕ್ಷ, ಪಕ್ಷವನ್ನು ಬೆಳೆಸಿರುವುದು ಕಾರ್ಯಕರ್ತರು, ಬಿಜೆಪಿ ಪಕ್ಷ ದೇಶಕ್ಕೆ ಸಮರ್ಪಿತವಾದದ್ದು. ಪ್ರಜಾಪ್ರಭುತ್ವ ನಮ್ಮ ಸಂಸ್ಕೃತಿಯ ಭಾಗ ಎಂದು ಮೋದಿ ಹೇಳಿದ್ದಾರೆ. 
SCROLL FOR NEXT