ದೇಶ

ಐಸಿಐಸಿಐ-ವೀಡಿಯೋಕಾನ್ ಸಾಲ ಪ್ರಕರಣ: ಚಂದಾ ಕೊಚಾರ್, ದೀಪಕ್ ಕೊಚಾರ್ ವಿರುದ್ಧ ಎಫ್ಐಆರ್

Raghavendra Adiga
ನವದೆಹಲಿ: ಐಸಿಐಸಿಐ ಬ್ಯಾಂಕ್- ವೀಡಿಯೋಕಾನ್ ನಡುವಿನ 3,250 ಕೋಟಿ ರೂ. ಅಕ್ರಮ ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಗುರುವಾರ ಚಂದ ಕೊಚಾರ್, ದೀಪಕ್ ಕೊಚಾರ್ ವಿರುದ್ಧ  ಎಫ್ಐಆರ್ ದಾಖಲಿಸಿದೆ. 
ಇದಕ್ಕೂ ಮುನ್ನ ಮುಂಬೈ ಹಾಗೂ ಔರಂಘಾಬಾದ್ ಬ್ಯಾಂಕಿನ ಕೇಂದ್ರ ಕಛೇರಿಗಳ ಮೇಲೆ ದಾಳಿ ನಡೆಸಿ ಶೋಧಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ಇದೇ ವೇಳೆ ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದ ಕೋಚಾರ್ ಅವರ ಪತಿ ದೀಪಕ್ ಕೋಚಾರ್ ಅವರ ಆಸ್ತಿಗಳನ್ನು ಸಹ ಸಿಬಿಐ ಶೋಧ ನಡೆಸಿದೆ. ಅವರಿಗೆ ಸೇರಿದ್ದ ನುಪವರ್ ಹಾಗೂ ಸುಪ್ರೀಂ ಪವರ್ ಸಂಸ್ಥೆಗಳ ಮೇಲೆ ಸಹ ತನಿಖಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ವೀಡಿಯೋಕಾನ್ ಸಂಸ್ಥೆಯು ಬ್ಯಾಂಕ್ ನಿಂದ 2012ರಲ್ಲಿ 3,250 ರೂ.ಸಾಲ ಪಡೆದ ಬಳಿಕ ಸಂಸ್ಥೆಯ ಪ್ರವರ್ತಕ ವೇಣುಗೋಪಾಲ್ ದೂತ್ ನುಪವರ್ ಸಂಸ್ಥೆಯಲ್ಲಿ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.
ವಿಡಿಯೊಕಾನ್ ಪ್ರವರ್ತಕ ವೇಣುಗೋಪಾಲ್ ದೂತ್, ದೀಪಕ್ ಕೋಚಾರ್ ಹಾಗೂ ಗುರುತಿಸಲಾಗದ ಇತರರ ವಿರುದ್ಧ ಪ್ರಾಥಮಿಕ ಹಂತದ ದೂರನ್ನು ಕಳೆದ ವರ್ಷ ಮಾರ್ಚ್ ನಲ್ಲೇ ಸಿಬಿಐ ದಾಖಲು ಮಾಡಿತ್ತು. ಈ ವೇಳೆ ಸಂಗ್ರಹಿಸಿದ ಪುರಾವೆಯ ಆಧಾರದ ಮೇಲೆ ಕ್ರಿಮಿನಲ್ ಆರೋಪಗಳ ತನಿಖೆಗಾಗಿ ಸಂಸ್ಥೆ ಇದೀಗ ಎಫ್ಐಆರ್ ದಾಖಲಿಸಿದೆ ಎಂದು ಅಧಿಕಾರಿಗಳು ವಿವರಿಸಿದರು.
ಇದೀಗ ತನಿಖಾ ಸಂಸ್ಥೆ ಪೂರ್ಣ ಪ್ರಮಾಣದ ತನಿಖೆಯನ್ನು ಪ್ರಾರಂಭಿಸಿದೆ.
SCROLL FOR NEXT