ಪಾಟ್ನಾ: ಮುಂಬರುವ ಸಾರ್ವತ್ರಿಕ ಚುನಾವಣೆಗೆ ತಯಾರಾಗುತ್ತಿರುವ ಎನ್ ಡಿಎ ಮಿತ್ರಪಕ್ಷಗಳ ಪ್ರಮುಖ ನಾಯಕ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ 2021ರಲ್ಲಿ ಜಾತಿ ಆಧಾರಿತ ಜನಗಣತಿ ನಡೆಸಬೇಕೆಂದು ಕರೆ ನಿಡಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮತ್ತು ಇತರ ಹಿಂದುಳಿದ ವರ್ಗಗಳ ಜನಸಂಖ್ಯೆ ಈ ಹಿಂದೆ ದಾಖಲಾಗಿದ್ದ 1931ರ ಜನಗಣತಿಗಿಂತ ಹೆಚ್ಚಾಗಿದೆ.`ಹೀಗಾಗಿ ಇದೀಗ ಮತ್ತೆ ಜಾತಿಗಣತಿ ನಡೆಯಬೇಕು ಎಂದು ಅವರು ಹೇಳಿದ್ದಾರೆ.
"ಪ. ಜಾತಿ, ಪ. ಪಂಗಡಗಳ ಜನಸಂಖ್ಯೆ ಏರಿಕೆಯಾಗಿದೆ. ಆದರೆ ಮೀಸಲಾತಿ ಪ್ರಮಾಣದಲ್ಲಿ ಶೇ. 50ರಷ್ತೇ ಇದೆ.ಇದೀಗ ನಮ್ಮ ಮುಂದೆ 1931ರ ಜನಗಣತಿ ಮಾತ್ರವೇ ಜಾತಿಯಾಧಾರಿತ ಜನಗಸಂಖ್ಯೆಯ ದಾಕಲೆಯಾಗಿ ಸಿಗುತ್ತಿದೆ.ಹೀಗಾಗಿ ಇದೀಗ ಮತ್ತೆ ಜಾತಿಗಣತಿ ನಡೆಸಿದ್ದಾದರೆ ನಮಗೆ ಸ್ಪಷ್ಟ ಚಿತ್ರಣ ಲಭ್ಯವಾಗುವುದರಲ್ಲಿ ಅನುಮಾನವಿಲ್ಲ."ನಿತೀಶ್ ಕುಮಾರ್ ಹೇಳಿದ್ದಾರೆ.
"ಬಿಹಾರದಲ್ಲಿ ಕರ್ಪೂರಿ ಠಾಕೂರ್ ಜಿ ಹಿಂದುಳಿದ ವರ್ಗಗಳನ್ನು ಅತ್ಯಂತ ಹಿಂದುಳಿದ ಮತ್ತು ಹಿಂದುಳಿದ ವರ್ಗಗಳಾಗಿ ವಿಂಗಡಿಸಿ ಮೀಸಲಾತಿ ನಿಡುವಂತೆ ಹೇಳಿದ್ದರು.ಇದೇ ಮಾದರಿಯನ್ನು ಕೇಂದ್ರ ಸರ್ಕಾರ ಸಹ ಅನುಸರಿಸಬೇಕೆಂದು ನಾನು ಬಯಸುತ್ತೇನೆ." ಬಿಹಾರ ಮಾಜಿ ಮುಖ್ಯಮಂತ್ರಿ ಜಾರಿಗೆ ತಂದ ಹಿಂದುಳಿದ ವರ್ಗಗಳ ಮೀಸಲಾತಿ ನೀತಿಯನ್ನು ಉಲ್ಲೇಖಿಸಿ ಅವರು ಮಾತನಾಡಿದರು.
2021 ರಲ್ಲಿ ನಿಗದಿಯಾಗಿರುವ ಮುಂದಿನ ಗಣತಿಯಲ್ಲಿ ಇದೇ ಮೊದಲ ಬಾರಿಗೆ ಓಬಿಸಿ ವರ್ಗದವರ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತಿದೆ.ನಕ್ಷೆಗಳು ಅಥವಾ ಜಿಯೋಫರೆನ್ಸಿಂಗ್ ಅನ್ನು ಸಹ ಇದೇ ಮೊದಲ ಬಾರಿಗೆ ಜನಗಣತಿಯಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ.2021ರ ಜನಗಣತಿಯಲ್ಲಿ ದತ್ತಾಂಶಗಳ ನಿಖರ ಸಂಗ್ರಹಣೆ ಮಾಡುವ ಸಲುವಾಗಿ 25 ಲಕ್ಷ ಜನಗಣತಿ ಅಧಿಕಾರಿಗಳಿಗೆ ಪರಿಣಿತಿ ನೀಡಲಾಗುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos