ಭಾರತ ರತ್ನ ಪ್ರಶಸ್ತಿಗೆ ಭಾಜನರಾದವರು 
ದೇಶ

ಭಾರತ ರತ್ನ ಪ್ರಶಸ್ತಿಗೆ ಭಾಜನರಾದವರಿಗೆ ಪ್ರಧಾನಿ ಮೋದಿ ಅಭಿನಂದನೆ

ಭಾರತ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹಾಗೂ ಹೆಸರಾಂತ ಗಾಯಕ ಭೂಪೆನ್ ಹಜಾರಿಕಾ, ಸಮಾಜ ಸೇವಕ ನಾನಾಜಿ ದೇಶ್ ಮುಖ್ ( ಮರಣೋತ್ತರ) ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ನವದೆಹಲಿ: ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ಪ್ರಶಸ್ತಿಗೆ  ಭಾಜನರಾಗಿರುವ  ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹಾಗೂ ಹೆಸರಾಂತ ಗಾಯಕ ಭೂಪೆನ್ ಹಜಾರಿಕಾ, ಸಮಾಜ ಸೇವಕ ನಾನಾಜಿ ದೇಶ್ ಮುಖ್ ( ಮರಣೋತ್ತರ)  ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಅಪ್ರತಿಮ ಸಂಸದೀಯ ಪಟುವಾಗಿದ್ದ ಪ್ರಣವ್ ಮುಖರ್ಜಿ, ದೇಶಕ್ಕಾಗಿ  ಹಲವು ದಶಕಗಳ ಕಾಲ ಸ್ವಾರ್ಥ ಇಲ್ಲದೆ ಶ್ರಮಿಸಿದ್ದಾರೆ. ಅವರ ಬುದ್ದಿವಂತಿಕೆ, ದೂರದೃಷ್ಟಿ ಹೋಲಿಸಲಾಗದಂತಹುದು ಎಂದು ಅವರು ಟ್ವೀಟ್ ಮಾಡಿದ್ದಾರೆ..
ಭೂಪನ್ ಹಜಾರಿಕಾ ಅವರ ಹಾಡುಗಳು ಮತ್ತು ಸಂಗೀತ ಎಲ್ಲಾ  ಪೀಳಿಗೆಯ ಜನರು ಪ್ರಶಂಸಿವಂತಿವೆ. ಅವರು ನ್ಯಾಯ, ಸೌಹಾರ್ದತೆ ಹಾಗೂ ಸಹೋದರ ಗುಣವನ್ನು ಹೊರಸೂಸುತ್ತಿದ್ದರಲ್ಲದೇ, ಸಂಗೀತ ಮತ್ತು ಸಾಹಿತ್ಯದ ಮೂಲಕ ಭಾರತೀಯ ಸಂಗೀತ ಸಂಪ್ರದಾಯವನ್ನು ವಿಶ್ವ ಮಟ್ಟದ ಪ್ರಸಿದ್ಧಿ ಪಡಿಸಿದ್ದರು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ನಾನಾಜಿ ದೇಶ್ ಮುಖ್  ಗ್ರಾಮೀಣಾಭಿವೃದ್ಧಿಗೆ ಅಪಾರ  ಕೊಡುಗೆ ನೀಡಿದ್ದು,   ಹಳ್ಳಿಗಳಲ್ಲಿ ವಾಸಿಸುವವರಿಗೆ ಅಧಿಕಾರ ನೀಡುವ ಹೊಸ ಮಾದರಿಯನ್ನು ತೋರಿಸಿದರು, ಅವರು  ಹಿಂದುಳಿದ ಜನರಿಗೆ   ಸಹಾನುಭೂತಿ ಮತ್ತು ಸೇವೆಗಳನ್ನು  ನೀಡಿದ್ದರು. ಸತ್ಯದ ಅರ್ಥದಲ್ಲಿ ಅವರು ಭಾರತ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಮೋದಿ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ