ದೇಶ

ಜನವರಿ 29 ರಂದು ಸುಪ್ರೀಂನಲ್ಲಿ ಅಯೋಧ್ಯ ವಿಚಾರಣೆ, ಸಾಂವಿಧಾನಿಕ ಪೀಠ ಪುನರ್ ರಚನೆ

Nagaraja AB

ನವದೆಹಲಿ: ಅಯೋಧ್ಯ ರಾಮಜನ್ಮಭೂಮಿ- ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದ ರಾಜಕೀಯ ಸೂಕ್ಷ್ಮ ಪ್ರಕರಣದ ವಿಚಾರಣೆ  ಜನವರಿ 29 ರಂದು ಸುಪ್ರೀಂಕೋರ್ಟ್ ನಲ್ಲಿ ನಡೆಯಲಿದ್ದು, ಐವರು ನ್ಯಾಯಾಧೀಶರನ್ನೊಳಗೊಂಡ ಹೊಸ ಸಂವಿಧಾನಿಕ ಪೀಠವನ್ನು ಸ್ಥಾಪಿಸಲಾಗಿದೆ.

ಜನವರಿ 10 ರಂದು ರಚಿಸಲಾಗಿದ್ದ ಸಾಂವಿಧಾನಿಕ ಪೀಠದಲ್ಲಿದ್ದ ನ್ಯಾಯಾಧೀಶರಾದ ಯುಯು ಲಲಿತ್  1997ರಲ್ಲಿ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಪರ ವಕಲತ್ತು ವಹಿಸಿದ್ದ ಹಿನ್ನೆಲೆಯಲ್ಲಿ ಅಯೋಧ್ಯ ಸಂಬಂಧಿತ ವಿಚಾರಣೆಯಲ್ಲಿ ಪಾಲ್ಗೊಳ್ಳಲು ಅವರೇ ಅಸಮಾಧಾನ ವ್ಯಕ್ತಪಡಿಸಿದ್ದರಿಂದ  ಸಾಂವಿಧಾನಿಕ ಪೀಠವನ್ನು ಪುನರ್ ರಚಿಸಲಾಗಿದೆ.

ಮುಖ್ಯ ನ್ಯಾಯಾಧೀಶ ರಂಜನ್ ಗೋಗೊಯ್ ನೇತೃತ್ವದಲ್ಲಿನ ಹೊಸ ಪೀಠದಲ್ಲಿ ನ್ಯಾಯಾಧೀಶರಾದ ಎಸ್ ಎ ಬೊಬ್ಡೆ, ಡಿ ವೈ ಚಂದ್ರಚೂಡ್,  ಅಶೋಕ್ ಭೂಷಣ್ ಮತ್ತು ಎಸ್ ಎ ನಾಸೀರ್ ಇದ್ದಾರೆ.
ಜನವರಿ 10 ರಂದು ರಚಿಸಲಾಗಿದ್ದ ಪೀಠದಲ್ಲಿ ನ್ಯಾಯಾಧೀಶ ಎನ್ ವಿ ರಾಮಣ್ಣ ಕೂಡಾ  ಹೊಸ ಪೀಠದ ಸದಸ್ಯರಾಗಿಲ್ಲ. ನ್ಯಾಯಾಧೀಶ ಭೂಷಣ್ ಕೂಡಾ ಹೊಸ ಸದಸ್ಯರಾಗಿದ್ದಾರೆ.
ನೂತನವಾಗಿ ಪುನರ್ ರಚಿಸಲಾದ ಸಾಂವಿಧಾನಿಕ ಪೀಠದಲ್ಲಿ ಜನವರಿ 29 ರಂದು ಅಯೋಧ್ಯ ವಿವಾದದ ವಿಚಾರಣೆ ನಡೆಯಲಿದೆ ಎಂದು ಸುಪ್ರೀಂಕೋರ್ಟ್  ರಿಜಿಸ್ಟ್ರರಿ ಪ್ರಮುಖ ರಾಜಕೀಯ ಪಕ್ಷಗಳಿಗೆ ಕಳುಹಿಸಿರುವ ನೋಟಿಸ್ ನಲ್ಲಿ ತಿಳಿಸಲಾಗಿದೆ.
SCROLL FOR NEXT