ಪಾಪ.. 'ಭಾರತ ರತ್ನ'ಕ್ಕೆ ಶಿವಕುಮಾರಸ್ವಾಮಿಗಳ ದರ್ಶನ ಭಾಗ್ಯವೇ ಇಲ್ಲ
ಬೆಂಗಳೂರು: ಗಣರಾಜ್ಯೋತ್ಸವ ದಿನಾಚರಣೆ ಹಿಂದಿನ ದಿನ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಪ್ರಣಬ್ ಮುಖರ್ಜಿ, ನಾನಾಜಿ ದೇಶ್ ಮುಖ್ ಹಾಗೂ ಹೆಸರಾಂತ ಗಾಯಕ ಭೂಪೆನ್ ಹಜಾರಿಕಾ ಅವರಿಗೆ ಭಾರತ ರತ್ನ ಘೋಷಣೆ ಮಾಡಲಾಗಿದೆ.
ಈ ಬಾರಿಯಾದರೂ ಸಿದ್ಧಗಂಗೆಯ ಸಂತ ಶಿವಕುಮಾರ ಸ್ವಾಮಿಗಳ ಸನ್ನಿಧಿ ಸೇರಿ ಭಾರತ ಪ್ರಶಸ್ತಿ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಡಾ. ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ ನೀಡದೇ ಇದ್ದರೂ ಸಹ ಅವರ ಘನತೆ ಭಾರತ ರತ್ನಕ್ಕಿಂತ ದೊಡ್ಡದು ಎಂದು ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಮೋದಿ ಸರ್ಕಾರಕ್ಕೆ ಭಾರತ ರತ್ನ ಪ್ರಶಸ್ತಿ ನೀಡುವಾಗ ಶಿವಕುಮಾರ ಸ್ವಾಮಿಗಳು ನೆನಪಾಗಲಿಲ್ಲವೇ, ಜನ ನಿಮ್ಮನ್ನ ಲೋಕಸಭಾ ಚುನಾವಣೆ ವೇಳೆ ವಿಚಾರಿಸಿಕೊಳ್ಳಲಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.