ದೇಶ

24 ಗಂಟೆಯಲ್ಲೇ ಅಯೋಧ್ಯಾ ವಿವಾದ ಬಗೆಹರಿಸುತ್ತೇವೆ: ಯೋಗಿ ಆದಿತ್ಯನಾಥ್

Lingaraj Badiger
ನವದೆಹಲಿ: ಅಯೋಧ್ಯ ವಿವಾದವನ್ನು ನಮಗೆ ಹಸ್ತಾಂತರಿಸಿದರೆ ನಾವು ಅದನ್ನು ಕೇವಲ 24 ಗಂಟೆಯಲ್ಲೇ ಬಗೆಹರಿಸುತ್ತೇವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶನಿವಾರ ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಜನ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದಷ್ಟು ಬೇಗ ತೀರ್ಪು ನೀಡಬೇಕು. ಬೇಗ ತೀರ್ಪ ನೀಡಲು ಸಾಧ್ಯವಾಗದಿದ್ದರೆ ವಿವಾದವನ್ನು ನಮಗೆ ಒಪ್ಪಿಸಿ. ನಾವು 24 ಗಂಟೆಯಲ್ಲಿ ಇತ್ಯಾರ್ಥಪಡಿಸುತ್ತೇವೆ ಎಂದು ಉತ್ತರ ಪ್ರದೇಶ ಸಿಎಂ ಹೇಳಿದ್ದಾರೆ.
ಅಯೋಧ್ಯಾ ವಿವಾದವನ್ನು ನೀವು ಮಾತಕತೆ ಮೂಲಕ ಬಗೆಹರಿಸುತ್ತೀರಾ? ಎಂಬ ಇಂಡಿಯಾ ಟಿವಿ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯೋಗಿ, ಕೋರ್ಟ್ ಮೊದಲು ವಿವಾದವನ್ನು ನಮಗೆ ಒಪ್ಪಿಸಲಿ ಎಂದರು.
ನಾನು ಈಗಲೂ ಸಹ ಆದಷ್ಟು ಬೇಗ ತೀರ್ಪು ನೀಡುವಂತೆ ಕೋರ್ಟ್ ಗೆ ಮನವಿ ಮಾಡುತ್ತಿದ್ದೇನೆ. ವಿವಾದವನ್ನು ಅನಗತ್ಯವಾಗಿ ಎಳೆಯಲಾಗುತ್ತಿದೆ. ನಮಗೆ ಆದಷ್ಟು ಬೇಗ ನ್ಯಾಯ ಸಿಗಬೇಕು ಎಂದರು.
ಇದೇ ವೇಳೆ, ಉತ್ತರ ಪ್ರದೇಶದಲ್ಲಿ ಬಿಜೆಪಿ ಕಳೆದ ಲೋಕಸಭೆ ಚುನಾವಣೆಗಿಂತಲೂ ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಿಎಂ ಹೇಳಿದ್ದಾರೆ.
SCROLL FOR NEXT