ಗಾಂಧಿನಗರ(ಗುಜರಾತ್): ಲಿಂಗ ಸಮಾನತೆಯ ಹೋರಾಟದಲ್ಲಿ ಮಹಿಳೆಯರು ಮಾತ್ರವಲ್ಲ, ಪುರುಷರು ಪ್ರಮುಖ ಪಾತ್ರ ವಹಿಸಿಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಡಿವೈ ಚಂದ್ರಚೂಡ್ ಅವರು ಹೇಳಿದ್ದಾರೆ.
ಡಿವೈ ಚಂದ್ರಚೂಡ್ ಅವರನ್ನು ಒಳಗೊಂಡಿದ್ದ ಪಂಚ ಪೀಠ ಈ ಹಿಂದೆ ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಹುದು ಎಂಬ ಐತಿಹಾಸಿಕ ತೀರ್ಪು ನೀಡಿತ್ತು. ಇನ್ನು ಜನರಿಂದ ಮಹಿಳೆಯರು ಎದುರಿಸುತ್ತಿರುವ ಹಿಂಸಾಚಾರ ಮತ್ತು ತಾರತಮ್ಯದಿಂದಾಗಿ ಮಹಿಳೆಯರ ಹಕ್ಕುಗಳು ಮತ್ತು ಸಮಸ್ಯೆಗಳಿಗೆ ಸೂಕ್ಷ್ಮವಾಗಿ ಸಂಯೋಜಿಸಲಾಗಿದೆ ಎಂದರು.
ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಡಿವೈ ಚಂದ್ರಚೂಡ್ ಅವರು, ಮಹಿಳೆಯರು ಅಸಾಧ್ಯವಾದ ಮಾನದಂಡಗಳಿಗೆ ಬಲವಂತವಾಗಿ ಅಂಟಿಕೊಳ್ಳುವುದು, ಮಹಿಳಾ ಲಿಂಗ ತಾರತಮ್ಯ, ಹಿಂಸಾಚಾರ ಮತ್ತು ಕಿರುಕುಳವನ್ನು ಮಹಿಳೆಯರು ಎದುರಿಸುತ್ತಿದ್ದು ಮಹಿಳಾ ಹಕ್ಕುಗಳು ಮತ್ತು ಸಮಸ್ಯೆಗಳು ಕೆಟ್ಟದಾಗಿವೆ ಎಂದರು.