ದೇಶ

ಪ್ರಜಾಪ್ರಭುತ್ವದ ಮೌಲ್ಯಗಳು ಅಪಾಯದಲ್ಲಿವೆ: ನ್ಯಾ. ಸಿಕ್ರಿ

Srinivas Rao BV
ಪ್ರಜಾಪ್ರಭುತ್ವದ ಮೌಲ್ಯಗಳು ಅಪಾಯದಲ್ಲಿವೆ ಎಂದು ಸುಪ್ರೀಂ ಕೋರ್ಟ್ ನ ನ್ಯಾ. ಸಿಕ್ರಿ ಆತಂಕ ವ್ಯಕ್ತಪಡಿಸಿದ್ದಾರೆ. 
ಗುಜರಾತ್ ಕಾನೂನು ವಿಶ್ವವಿದ್ಯಾನಿಲಯದಲ್ಲಿ 9 ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿರುವ ನ್ಯಾ.ಸಿಕ್ರಿ, ನಾವು ವಿವಿಧ ರೀತಿಯ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿದ್ದೇವೆ. ವಿಶ್ವದ ಮಟ್ಟದಲ್ಲಿ ಚಿಂತಿಸಿದರೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅಪಾಯ ಉಂಟಾಗಿದೆ. ಗ್ರೀಕರು ನಮಗೆ 2,500 ವರ್ಷಗಳ ಹಿಂದೆ ನೀಡಿದ ಮೌಲ್ಯಗಳಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಸಿಕ್ರಿ ಹೇಳಿದ್ದಾರೆ. 
ನಾವು ಹಲವಾರು ಸವಾಲುಗಳನ್ನು ಎದುರಿಸುತ್ತಿರುತ್ತೇವೆ. ಈ ಎಲ್ಲಾ ವಿಷಯಗಳಲ್ಲಿ ಹಾಗೂ ಸಾಂವಿಧಾನಿಕ ಯೋಜನೆಗಳಲ್ಲಿ ನ್ಯಾಯಾಧೀಶರು ಮಹತ್ವದ ಪಾತ್ರ ವಹಿಸುತ್ತಾರೆ. ನ್ಯಾಯಾಧೀಶರ ಎರಡು ಮುಖ್ಯ ಕರ್ವವ್ಯಗಳೆಂದರೆ ಒಂದು ಕಾನೂನು ಮತ್ತು ಸಂವಿಧಾನವನ್ನು ಎತ್ತಿ ಹಿಡಿಯುವುದು ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸುವುದೇ ಆಗಿದೆ ಎಂದು ನ್ಯಾಯಮೂರ್ತಿಗಳು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. 
SCROLL FOR NEXT