ಅಹಮದಾಬಾದ್: ಗುಜರಾತ್ ಮಾಜಿ ಮುಖ್ಯಮಂತ್ರಿ ಶಂಕರ್ ಸಿಂಗ್ ವಾಘೇಲಾ ಇಂದು ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿ-ಎನ್ ಸಿಪಿ ಸೇರ್ಪಡೆಯಾಗಿದ್ದಾರೆ. ಶರದ್ ಪವರ್ ಅವರ ಸಮ್ಮುಖದಲ್ಲಿ ಎನ್ ಸಿಪಿಗೆ ಸೇರ್ಪಡೆಯಾದ ಶಂಕರ್ ಸಿಂಗ್ ವಾಘೇಲಾ, ಭ್ರಷ್ಟ, ಕ್ರೂರಿ ಬಿಜೆಪಿ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.
ಗುಜರಾತಿನ ಜನ ನನ್ನನ್ನು ತುಂಬಾ ಪ್ರೀತಿಸುತ್ತಾರೆ. ಅವರಿಗೆ ಏನನ್ನಾದರೂ ಹಿಂದಕ್ಕೆ ಕೊಡಬೇಕು. ಅದಕ್ಕಾಗಿ ಎನ್ ಸಿಪಿಗೆ ಸೇರ್ಪಡೆಯಾಗಿದ್ದು,ಮುಂದಿನ ದಿನಗಳಲ್ಲಿ ಯುಪಿಎ-3ಯಂತೆ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ ಹೇಳಿದರು.
ಪ್ರಸ್ತುತದಲ್ಲಿನ ಬಿಜೆಪಿ ಸರ್ಕಾರ ಕ್ರೂರಿ ಹಾಗೂ ಭ್ರಷ್ಟಾಚಾರದಿಂದ ಕೂಡಿದೆ. ಅವರು ಹೇಳುವುದೆಲ್ಲಾ ಸುಳ್ಳು ಹಾಗೂ ಜನರು ಕೂಡಾ ಈ ಸರ್ಕಾರದಿಂದ ಬೇಸತ್ತಿದ್ದಾರೆ ಎಂದು ಆರೋಪಿಸಿದರು.