ದೇಶ

ಅಪ್ರಾಮಾಣಿಕ ನೌಕರರಿಗೆ ಕಡ್ಡಾಯ ನಿವೃತ್ತಿ: ತ್ರಿಪುರ ಸಿಎಂ ಎಚ್ಚರಿಕೆ

Lingaraj Badiger
ನವದೆಹಲಿ: ಸರಿಯಾಗಿ ಕಾರ್ಯನಿರ್ವಹಿಸದ ಅಪ್ರಾಮಾಣಿಕ, ಅಸಮರ್ಥ ಹಾಗೂ ಕರ್ತವ್ಯಲೋಪ ಎಸಗುವ ಸರ್ಕಾರಿ ನೌಕರರಿಗೆ ಕಡ್ಡಾಯ ನಿವೃತ್ತಿ ನೀಡಲಾಗುವುದು ಎಂದು ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರು ಸೋಮವಾರ ಎಚ್ಚರಿಕೆ ನೀಡಿದ್ದಾರೆ.
ಇಂದು ಬಿಜೆಪಿ ಪರ ಸರ್ಕಾರಿ ನೌಕರರ ಸಂಘಟನೆ ತ್ರಿಪುರ ರಾಜ್ಯ ಕರ್ಮಚಾರಿ ಸಂಘದ ಎರಡನೇ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ತ್ರಿಪುರಾ ಸಿಎಂ, ಬಿಜೆಪಿ  ಸರ್ಕಾರದಲ್ಲಿ ರಾಜ್ಯ ಸರ್ಕಾರಿ ನೌಕರರು ಅತಿ ಹೆಚ್ಚು ವೇತನ ಪಡೆಯುತ್ತಿದ್ದಾರೆ. ಆದರೂ ನೌಕರರು ಪ್ರಾಮಾಣಿಕವಾಗಿ ಸಮರ್ಥವಾಗಿ ಕೆಲಸ ಮಾಡದಿರುವುದು ಕಂಡುಬಂದರೆ ಅವರಿಗೆ ಕಡ್ಡಾಯ ನಿವೃತ್ತಿ ನೀಡಲಾಗುವುದು ಎಂದರು.
ನಾನು ಕೆಲಸವನ್ನು ಪೂಜಿಸುತ್ತೇನೆ ಮತ್ತು ಗಂಭೀರವಾಗಿ ಪರಿಗಣಿಸುತ್ತೇನೆ. ಎಲ್ಲರೂ ಸರಿಯಾಗಿ ಕಾರ್ಯ ನಿರ್ವಹಿಸಬೇಕೆಂದು ನಾನು ಬಯಸುತ್ತೇನೆ. ನೀವು ಸರ್ಕಾರಿ ಕೆಲಸ ಮಾಡಲು ಬಯಸಿದರೆ ಅದನ್ನು ಸರಿಯಾಗಿ ಮಾಡಿ. ಸಾವಿರಾರು ಯುವಕರು ನಿರುದ್ಯೋಗಿಗಳಾಗಿದ್ದಾರೆ. ಆದ್ದರಿಂದ, ನಿಮಗೆ ಕೆಲಸ ಮಾಡಲು ಆಗದಿದ್ದರೆ ಕೆಲಸವನ್ನು ಬಿಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲಿದ್ದಾರೆ ಮತ್ತು ಅದರ ಆಧಾರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
SCROLL FOR NEXT