ದೇಶ

ತಮಿಳುನಾಡು: ತೇಜಸ್ ವಿಮಾನದಿಂದ ಕಳಚಿ ಬಿತ್ತು 1200 ಲೀ ಇಂಧನ ಟ್ಯಾಂಕ್!

Raghavendra Adiga
ಕೊಯಮತ್ತೂರ್(ತಮಿಳುನಾಡು): ಆಗಸದಲ್ಲಿ ಚಲಿಸುತ್ತಿದ್ದ ತೇಜಸ್ ವಿಮಾನದ ಇಂಧನ ಟ್ಯಾಂಕ್ ಇದ್ದಕ್ಕಿದ್ದಂತೆ ಕಳಚಿ ಕೃಷಿ ಭೂಮಿಯಲ್ಲಿ ಬಿದ್ದಿರುವ ಘಟನೆ ತಮಿಳುನಾಡಿನ ಕೊಯಮತ್ತುರಿನಲ್ಲಿ ನಡೆದಿದೆ. ಮಂಗಳವಾರ ಮುಂಜಾನೆ ನಗರದ ಹೊರವಲಯದಲ್ಲಿರುವ ಕೃಷಿ  ಜಮೀನಿನಲ್ಲಿ ಇಂಧನ ಟ್ಯಾಂಕ್ ನಿದ್ದಿದ್ದಾಗಿ ಪೋಲೀಸರು ಹೇಳಿದ್ದಾರೆ.
ಘಟನೆಯಲ್ಲಿ ವಿಮಾನದಲ್ಲಿರುವವರಿಗೆ ಅಥವಾ ಸ್ಥಳೀಯರಿಗೆ ಯಾವ ಗಾಯವಾಗಿಲ್ಲ ಎಂದು ಚೆನ್ನೈನ ರಕ್ಷಣಾ ಮೂಲಗಳು ಸ್ಪಷ್ಟಪಡಿಸಿದೆ.
ಆಕಾಶದಿಂದ ಇದ್ದಕ್ಕಿದ್ದ ಹಾಗೆ 1200 ಲೀಟರ್ ಪೆಟ್ರೋಲ್ ಟ್ಯಾಂಕ್ ಬೀಳುತ್ತಿರುವುದನ್ನು ನೋಡಿ ಇಡುಗೂರ್ ಗ್ರಾಮದಲ್ಲಿನ ಕೃಷಿ ಕಾರ್ಮಿಕರು ಆಘಾತಕ್ಕೊಳಗಾಗಿದ್ದರು. ಇನ್ನು ಅಷ್ಟು ಎತ್ತರದಿಂದ ಟ್ಯಾಂಕ್ ಬಿದ್ದ ಕಾರಣ ನೆಲದಲ್ಲಿ ಮೂರಡಿ ಆಳದ ಕುಳಿ ಉಂಟಾಗಿದೆಯಲ್ಲದೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ಅದಾಗ್ಯೂ ತೇಜಸ್ ಯುದ್ಧ ವಿಮಾನವು ಸಮೀಪದ ಸೂಳೂರ್ ವಾಯುನೆಲೆಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಭಾರತೀಯ ವಾಯುಪಡೆಯ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.ಅಪಘಾತಕ್ಕೆ ಕಾರಣವನ್ನು ಇನ್ನಷ್ಟೇ ಪತ್ತೆ ಮಾಡಬೇಕಿದೆ ಎಂದು ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ.
SCROLL FOR NEXT