ಅನಿವಾಸಿ ಕೇರಳರಿಗರಿಗೆ ಶೀಘ್ರವೇ ಮತದಾನದ ಹಕ್ಕು 
ದೇಶ

ಅನಿವಾಸಿ ಕೇರಳರಿಗರಿಗೆ ಶೀಘ್ರವೇ ಮತದಾನದ ಹಕ್ಕು

ಮುಂಬರುವ ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಅನಿವಾಸಿ ಕೇರಳಿಗರಿಗೆ ಮತದಾನದ ಹಕ್ಕು ನೀಡುವ ಬಗ್ಗೆ ಶೀಘ್ರವೇ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಮುಂಬರುವ ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಅನಿವಾಸಿ ಕೇರಳಿಗರಿಗೆ ಮತದಾನದ ಹಕ್ಕು ನೀಡುವ ಬಗ್ಗೆ ಶೀಘ್ರವೇ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. 
ವಿಧಾನಸಭೆಯಲ್ಲಿ ಮಾತನಾಡಿರುವ ಪಿಣರಾಯಿ ವಿಜಯನ್, ಕೇರಳ ಅನಿವಾಸಿಗಳಿಗೆ ಮತದಾನದ ಹಕ್ಕು ದೊರೆಯಬೇಕಾದರೆ ಹಲವು ಪ್ರಕ್ರಿಯೆಗಳಿವೆ ನಿರ್ದಿಷ್ಟ ಇಲಾಖೆಗಳ ನಡುವೆ ಸಮನ್ವಯದ ಅಗತ್ಯವಿದೆ. ಸಂಬಂಧಪಟ್ಟವರೊಂದಿಗೆ ಈ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಹೇಳಿದ್ದಾರೆ. 
ಹಲವು ದಶಕಗಳಿಂದ ಕೇರಳ ಆರ್ಥಿಕತೆಯ ಬೆನ್ನೆಲುಬಾಗಿರುವ ಅನಿವಾಸಿ ಕೇರಳಿಗರಿಗೆ ಮತದಾನದ ಹಕ್ಕು ದೊರೆಯಬೇಕು, ಅನಿವಾಸಿ ಭಾರತೀಯರಿಗೆ ಮತದಾನ ಮಾಡುವ ಹಕ್ಕನ್ನು ಲೋಕಸಭೆಯಲ್ಲೂ ಅಂಗೀಕರಿಸಲಾಗಿದೆ. ಆದ್ದರಿಂದ ಅನಿವಾಸಿ ಕೇರಳಿಗರಿಗೂ ಮತದಾನ ಮಾಡುವ ಹಕ್ಕು ದೊರೆಯಬೇಕೆಂದು ವಿಪಕ್ಷದ ಉಪನಾಯಕ ಎಂ.ಕೆ ಮುನೀರ್ ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಪಿಣರಾಯಿ ವಿಜಯನ್ ಸದನಕ್ಕೆ ಮಾಹಿತಿ ನೀಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ–ಇರಾನ್ ಶಾಂತಿ ಮಾತುಕತೆ ವಿಫಲ: ಷೇರು ಮಾರುಕಟ್ಟೆ ಮೇಲೆ ಪರಿಣಾಮ; ಸೆನ್ಸೆಕ್ಸ್ 1600 ಅಂಕ ಕುಸಿತ, ತೈಲ ಬೆಲೆ ಏರಿಕೆ..!

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

ನೀವು ಪೋಪ್ ಆಗಲು ನಾನು ಕಾರಣ, ರಾಜಕಾರಣ ಬಿಟ್ಟು ಧರ್ಮಗುರುವಿನ ಕೆಲಸ ಮಾಡಿ: ಪೋಪ್ ಲಿಯೋ XIV ವಿರುದ್ಧ ಟ್ರಂಪ್ ವಾಗ್ದಾಳಿ

ಕಾಂಗ್ರೆಸ್‌ನಲ್ಲಿ ಕುರ್ಚಿ ಕಸರತ್ತು: ದೆಹಲಿಗೆ 'ಕೈ' ಶಾಸಕರ ಪ್ರಯಾಣ, ಸಚಿವ ಸ್ಥಾನಕ್ಕಾಗಿ ಲಾಬಿ..!

'ಕೆಲವು ಸಚಿವರು ಕೈಗೂ ಸಿಗಲ್ಲ, ಫೋನಿಗೂ ಸಿಗಲ್ಲ: ದೇವಲೋಕದಿಂದ ಬಂದಂತೆ ಆಡ್ತಾರೆ; ಅಂತವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಿ'

SCROLL FOR NEXT