ಚುನಾವಣೇಲಿ ಬಿಜೆಪಿ ಗೆ ಜಯ: ಗುಜರಾತಿನಿಂದ ದೆಹಲಿಗೆ ಸೈಕಲ್ ಮೇಲೆ ಬಂದು ಪ್ರಧಾನಿಗೆ ಶುಭಕೋರಿದ ಅಭಿಮಾನಿ! 
ದೇಶ

ಚುನಾವಣೇಲಿ ಬಿಜೆಪಿ ಗೆ ಜಯ: ಗುಜರಾತಿನಿಂದ ದೆಹಲಿಗೆ ಸೈಕಲ್ ಮೇಲೆ ಬಂದು ಪ್ರಧಾನಿಗೆ ಶುಭಕೋರಿದ ಅಭಿಮಾನಿ!

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮುನ್ನೂರಕ್ಕೆ ಹೆಚ್ಚು ಸ್ಥಾನ ಗಳಿಸಿದ್ದ ಕಾರಣ ಗುಜರಾತಿನ ಅಭಿಮಾನಿಯೊಬ್ಬ ತನ್ನ ಊರಿಂದ ದೆಹಲಿಗೆ ಸೈಕಲ್ ಮೇಲೆ ಆಗಮಿಸಿ ಪ್ರಧಾನಿ ನರೇಂದ್ರ ಮೋದಿ....

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮುನ್ನೂರಕ್ಕೆ ಹೆಚ್ಚು ಸ್ಥಾನ ಗಳಿಸಿದ್ದ ಕಾರಣ ಗುಜರಾತಿನ ಅಭಿಮಾನಿಯೊಬ್ಬ  ತನ್ನ ಊರಿಂದ ದೆಹಲಿಗೆ ಸೈಕಲ್ ಮೇಲೆ ಆಗಮಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಅಭಿನಂದಿಸಿರುವ ಅಪರೂಪದ ಘಟನೆ ನಡೆದಿದೆ.
ಬಿಜೆಪಿ ಕಾರ್ಯಕರ್ತ ಖಿಂಚಂದ್ ಚಂದ್ರಾಣಿ ಗುಜರಾತಿನ ಅಮ್ರೆಲಿಯಿಂದ ಸೈಕಲ್ ಏರಿ ದೆಹಲಿಗೆ ಆಗಮಿಸಿದ್ದು ಪ್ರಧಾನಿಗೆ ಶುಭಾಶಯಕೋರಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 300 ಕ್ಕೂ ಹೆಚ್ಚು ಸ್ಥಾನಗಳು ದೊರೆತರೆ, ನಾನು ಸೈಕಲ್‌ನಲ್ಲಿ ದೆಹಲಿಗೆ ಬರುತ್ತೇನೆ ಮತ್ತು ಅವರನ್ನು ಅಭಿನಂದಿಸುತ್ತೇನೆ ಎಂದು ಚಂದ್ರಾಣಿ ಸಂಕಲ್ಪ ಮಾಡಿದ್ದರು. ಅದರಂತೆ ಅವರಿಂದು ದೆಹಲಿಗೆ ಆಗಮಿಸಿದ್ದಾರೆ.
ಇನ್ನು ಅವರ ಸೈಕಲ್ ಪ್ರಯಾಣವು ಹಲವಾರು ಅಭಿಮಾನಿಗಳನ್ನು ಸೆಳೆದಿದ್ದು ನಮ್ರತೆ, ಉತ್ಸಾಹ ಹಲವರನ್ನು ಆಕರ್ಷಿಸಿದೆ.
"ಲೋಕಸಭೆ ಚುನಾವಣೆಯಲ್ಲಿ  ಬಿಜೆಪಿಗೆ 300 ಕ್ಕೂ ಹೆಚ್ಚು ಸ್ಥಾನಗಳು ಬಂದರೆ ಅವರನ್ನು ಅಭಿನಂದಿಸಲು ನಾನು ಸೈಕಲ್‌ನಲ್ಲಿ ದೆಹಲಿಗೆ ಬರುತ್ತೇನೆ ಎಂಬ ನಿರ್ಣಯವನ್ನು ಕೈಗೊಂಡಿದ್ದೆ, ಈ ದೂರವನ್ನು ಕ್ರಮಿಸಲು ನನಗೆ 17 ದಿನಗಳು ಬೇಕಾಯಿತು. ನಾನು ಪ್ರಧಾನ ಮಂತ್ರಿಯೊಂದಿಗೆ ಮಾತನಾಡಿದೆ, ಅವರು 'ನಿಮಗೆ ತುಂಬಾ ಧೈರ್ಯವಿದೆ' ಎಂದು ಹೇಳಿದರು. ನಾನು ನಾಳೆ ಅಥವಾ ನಾಡಿದ್ದು ಗೃಹಮಂತ್ರಿ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದೇನೆ." ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!