ದೇಶ

ಪಶ್ಚಿಮ ಬಂಗಾಳವನ್ನು 'ಬಾಂಗ್ಲಾ' ಎಂದು ಕರೆಯಲು ಸಾಧ್ಯವಿಲ್ಲ: ಮೋದಿ ಸರ್ಕಾರದಿಂದ ಮಮತಾ ಬೇಡಿಕೆ ತಿರಸ್ಕೃತ

Raghavendra Adiga
ನವದೆಹಲಿ: ಪಶ್ಚಿಮ ಬಂಗಾಳದ ಹೆಸರನ್ನು ಬಾಂಗ್ಲಾ ಎಂದು ಬದಲಿಸಬೇಕೆನ್ನುವ ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿಯವರ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.
ಬುಧವಾರ ರಾಜ್ಯಸಭೆಯಲ್ಲಿ ಮಾತನಾಡಿದ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರೈ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರದ ಪ್ರಸ್ತಾಪದಂತೆ ಪಶ್ಚಿಮ ಬಂಗಾಳಕ್ಕೆ 'ಬಾಂಗ್ಲಾ' ಎಂದು ಮರುನಾಮಕರಣ ಮಾಡುವುದಕ್ಕೆ ಕೇಂದ್ರ ನಿರಾಕರಿಸಿದೆ ಎಂದು ಹೇಳಿದ್ದಾರೆ.
ರಾಜ್ಯಸಭಾ ಸಂಸದ ರಿತಬ್ರತಾ ಬ್ಯಾನರ್ಜಿ ಸಂಸತ್ತಿನ ಮೇಲ್ಮನೆಯಲ್ಲಿ ಈ ಕುರಿತು ಪ್ರಶ್ನೆ ಕೇಳಿದ್ದು ಇದಕ್ಕೆ ರೈ ಉತ್ತರಿಸಿದ್ದಾರೆ. 
ಕಳೆದ ವರ್ಷ ಜುಲೈ 26 ರಂದು ಪಶ್ಚಿಮ ಬಂಗಾಳ ವಿಧಾನಸಭೆ ರಾಜ್ಯದ ಹೆಸರನ್ನು 'ಬಾಂಗ್ಲಾ' ಎಂದು ಬದಲಾಯಿಸುವ ನಿರ್ಣಯವನ್ನು ಅಂಗೀಕರಿಸಿತು. ನಂತರ ನಿರ್ಣಯವನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಅನುಮೋದನೆಗಾಗಿ ಕಳುಹಿಸಲಾಗಿತ್ತು.
SCROLL FOR NEXT