ದೇಶ

ಪಾಕಿಸ್ತಾನಕ್ಕೀಗ ಧೈರ್ಯವಿಲ್ಲ, ಕಾರ್ಗಿಲ್ ನಂತಹ ಪ್ರಯತ್ನ ಮತ್ತೆ ಮಾಡಲ್ಲ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

Raghavendra Adiga
ನವದೆಹಲಿ: 1999 ರಲ್ಲಿ ಕಾಂರ್ಗಿಲ್ ನಲ್ಲಿ ಮಾಡಿದಂತೆ ಪಾಕಿಸ್ತಾನ ಇನ್ನೊಮ್ಮೆ ಪ್ರಯತ್ನ ಮಾಡುವುದಿಲ್ಲ ಏಕೆಂದರೆ ಅದು ಸಾಕಷ್ಟು "ಪರಿಣಾಮಗಳನ್ನು" ಉಂಡಿದೆ ಎಂದು ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.  ಸಶಸ್ತ್ರ ಪಡೆಗಳು ಗಡಿ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ನಿಗಾ ವಹಿಸಿದೆ ಎಂದು ಅವರು ಪ್ರತಿಪಾದಿಸಿದರು
ಕಾರ್ಗಿಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಯುದ್ಧದ 20 ವರ್ಷಗಳ ಆಪರೇಷನ್ ವಿಜಯ್ ನೆನಪಿಗಾಗಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
"ನಾವು ಯಾವುದೇ ಪ್ರದೇಶವನ್ನೂ ರಕ್ಷಿಸದೆ ಬಿಡುವುದಿಲ್ಲ.  ನಮ್ಮ ಕಣ್ಗಾವಲು ತಂಡವು ಕಟ್ಟುನಿಟ್ಟಾಗಿ ಕಾವಲು ಕಾಯುತ್ತಿವೆ. ಗಡಿಯಲ್ಲಿ ನಿಯಮಿತವಾಗಿ ಗಸ್ತು ತಿರುಗುತ್ತಿದೆ
"ಪಾಕಿಸ್ತಾನವು  ಅಂತಹದನ್ನು (ಕಾರ್ಗಿಲ್ ನಂತೆ)ಮತ್ತೆ ಯುದ್ಧಕ್ಕೆ ಮುಂದಾಗುವುದಿಲ್ಲ ಎಂದು ನಾನು ಭಾವಿಸಿದ್ದೇನೆ. ಏಕೆಂದರೆ ಅವರು ಅದರ ಪರಿಣಾಮಗಳನ್ನು ನೋಡಿದ್ದಾರೆ. ಮುಂಬರುವ ದಿನಗಳು ಮತ್ತು ವರ್ಷಗಳಲ್ಲಿ ಪಾಕಿಸ್ತಾನ ಯಾವುದೇ ಒಳನುಸುಳುವಿಕೆಯನ್ನು ಪ್ರಯತ್ನಿಸಲು ಧೈರ್ಯ ಮಾಡುವುದಿಲ್ಲ" ಎಂದು ಸೇನಾ ಮುಖ್ಯಸ್ಥರು ಸುದ್ದಿಗಾರರಿಗೆ ತಿಳಿಸಿದರು.
 ಬಾಲಿವುಡ್ ಗೀತರಚನೆಕಾರ ಸಮೀರ್ ಬರೆದ ಕಾರ್ಗಿಲ್ ವೀರರಿಗೆ ಮೀಸಲಾದ ವಿಶೇಷ ಗೌರವದ ಹಾಡಿನ ವಿಡಿಯೋವನ್ನೂ ಅವರು ಬಿಡುಗಡೆ ಮಾಡಿದರು.ವೀಡಿಯೊದಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಇತರ ಪ್ರಸಿದ್ಧ ನಟರು ಇದ್ದಾರೆ.
SCROLL FOR NEXT