ದೇಶ

50 ಸಾವಿರ ರು. ಮೇಲ್ಪಟ್ಟ ಹಣ ವರ್ಗಾವಣೆಗೆ ಆಧಾರ್ ಬಳಸಬಹುದು: ಕಂದಾಯ ಕಾರ್ಯದರ್ಶಿ

Lingaraj Badiger
ನವದೆಹಲಿ: 50 ಸಾವಿರ ರುಪಾಯಿಗಿಂತ ಹೆಚ್ಚು ಹಣ ವರ್ಗಾವಣೆಗೆ ಭಾರತದ ರಾಷ್ಟ್ರೀಯ ಬಯೋಮೆಟ್ರಿಕ್ ಐಡಿ ಕಾರ್ಡ್ ಆಧಾರನ್ನು ಬಳಸಬಹುದು ಮತ್ತು ಇತರೆ ಉದ್ದೇಶಗಳಿಗೆ ಎಂದಿನಂತೆ ಪಾನ್ ಕಾರ್ಡ್ ಕಡ್ಡಾಯ ಎಂದು ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಬ್ಯಾಂಕ್ ಮತ್ತು ಇತರೆ ಸಂಸ್ಥೆಗಳಲ್ಲಿ ಆಧಾರ್ ಅನ್ನು ಒಪ್ಪಿಕೊಳ್ಳಲಾಗುತ್ತಿದೆ. 50 ಸಾವಿರ ರುಪಾಯಿ ಮೇಲ್ಪಟ್ಟ ಹಣ ವರ್ಗಾವಣೆಗೆ ಪಾನ್ ಬದಲಿಗೆ ಆಧಾರ್ ಅನ್ನು ಬಳಸಬಹುದು ಎಂದು ಕಂದಾಯ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಅವರು ಹೇಳಿದ್ದಾರೆ.
ಇತ್ತೀಚಿಗಷ್ಟೇ ಕೇಂದ್ರ ಹಣಕಾಸು ಸಚಿವೆ ನಿರ್ಮಾಣ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ನಲ್ಲಿ ಐಟಿ ರಿಟರ್ನ್ಸ್ ಗಾಗಿ ತೆರಿಗೆದಾರರು ಪಾಕ್ ಕಾರ್ಡ್ ಬದಲು ಆಧಾರ್ ಕಾರ್ಡ್ ಬಳಸುವಂತೆ ಮಾಡಲಾಗುವುದು ಎಂದು ಹೇಳಿದ್ದರು. 
ದೇಶದಲ್ಲಿ ಸದ್ಯ 22 ಕೋಟಿ ಪಾನ್ ಕಾರ್ಡ್ ಗಳು ಇದ್ದು, ಅದಕ್ಕೆ ಆಧಾರ್ ಲಿಂಕ್ ಮಾಡಲಾಗಿದೆ. ಆದರೆ 120 ಕೋಟಿ ಭಾರತೀಯರು ಆಧಾರ್ ಹೊಂದಿದ್ದಾರೆ. ಹೀಗಾಗಿ ಪಾನ್ ಕಾರ್ಡ್ ಪಡೆಯಲು ಮತ್ತು ಹಣ ವರ್ಗಾಣೆಗೆ ಆಧಾರ್ ಇದ್ದರೆ ಸಾಕು ಎಂದು ಪಾಂಡೆ ತಿಳಿಸಿದ್ದಾರೆ.
SCROLL FOR NEXT