ದೇಶ

ಸೆಕ್ಸ್'ಗೆ ಪತ್ನಿ ನಿರಾಕರಣೆ, ಆಕೆಯನ್ನು ಕೊಂದು, ತನ್ನ ಮರ್ಮಾಂಗ ಕತ್ತರಿಸಿಕೊಂಡ ಪತಿ!

Vishwanath S
ಗೋರಖ್ ಪುರ: ಸೆಕ್ಸ್ ಗೆ ಪತ್ನಿ ನಿರಾಕರಿಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪತಿ ಆಕೆಯ ಕತ್ತು ಹಿಸುಕಿ ಹತ್ಯೆ ಮಾಡಿ ಕೊನೆಗೆ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿರುವ ಘಟನೆ ಗೋರಖ್ ಪುರದಲ್ಲಿ ನಡೆದಿದೆ. 
ಸಿದ್ಧಾರ್ಥನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು 24 ವರ್ಷದ ಅನ್ವರುಲ್ ಹಸನ್ ಮರ್ಮಾಂಗ ಕತ್ತರಿಸಿಕೊಂಡ ವ್ಯಕ್ತಿ. ಒಂದು ವರ್ಷದ ಹಿಂದೆ ದಂಪತಿ ಮದುವೆಯಾಗಿತ್ತು. ಸೂರತ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಹಸನ್ ಎರಡು ದಿನಗಳ ಹಿಂದೆ ಮನೆಗೆ ಮರಳಿದ್ದ. ಈ ವೇಳೆ ಸೆಕ್ಸ್ ಗೆ ಪತ್ನಿಯನ್ನು ಒತ್ತಾಯಿಸಿದ್ದಾನೆ ಇದಕ್ಕೆ ಪತ್ನಿ 21 ವರ್ಷದ ಮೆಹಜಾನ್ ನಿರಾಕರಿಸಿದ್ದು ಆವೇಶದಲ್ಲಿ ಆಕೆಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. 
ನಂತರ ಕೋಪದಲ್ಲಿ ಆತ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಹಸನ್ ನನ್ನು ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 
ಈ ಕುರಿತಂತೆ ಮೃತ ಮೆಹಜಾನ್ ತಂದೆ ಪೊಲೀಸರಿಗೆ ದೂರು ನೀಡಿದ್ದು ವರದಕ್ಷಿಣೆಗಾಗಿ ನನ್ನ ಮಗಳನ್ನು ಹತ್ಯೆ ಮಾಡಲಾಗಿದೆ ಎಂದು ದೂರಿದ್ದಾರೆ. 
SCROLL FOR NEXT