ದೇಶ

'ಸಲ್ಲಿಂಗಿಯಾಗಿ ಹುಟಿದ್ದು ನನ್ನ ತಪ್ಪಲ್ಲ ' ತೃತೀಯ ಲಿಂಗಿ ಭಯದಿಂದ ಯುವಕ ಆತ್ಮಹತ್ಯೆ

Nagaraja AB
ಚೆನ್ನೈ:  ತಾನೂ ತೃತೀಯ ಲಿಂಗಿಯಾಗುತ್ತಿದ್ದು, ಸಮಾಜ ಸ್ವೀಕರಿಸಲ್ಲ ಎಂಬ ಭಯದಿಂದ  20 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೀಲಂಗರೈ ಬೀಚ್ ನಲ್ಲಿ ನಡೆದಿದೆ.
ಕೆಲಸಕ್ಕೆಂದು ಮೂರು ತಿಂಗಳ ಹಿಂದೆ ಮುಂಬೈಯಿಂದ ಚೆನ್ನೈಗೆ ಹೋಗಿದ್ದ 20 ವರ್ಷದ ಅವಿಂಶು ಪಾಟೀಲ್  ಮೃತ ಯುವಕ.  ಜುಲೈ 2 ರಂದು ನೀಲಂಗರೈ ಬೀಚ್ ನಲ್ಲಿ  ಅವಿ  ಮೃತದೇಹ ಪತ್ತೆಯಾಗಿತ್ತು. ತಾನೂ ತೃತೀಯ ಲಿಂಗಿಯಾಗುತ್ತಿದ್ದು, ಸಮಾಜ ಸ್ವೀಕರಿಸಲ್ಲ  ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಫೇಸ್ಬುಕ್  ಖಾತೆಯಲ್ಲಿ  ಬರೆದುಕೊಂಡಿದ್ದಾನೆ.
'ನಾನು ಹುಡುಗ ಎಂಬುದು ಎಲ್ಲರಿಗೂ ಗೊತಿತ್ತು. ಆದರೆ, ನಡೆಯುವುದು, ಆಲೋಚನಾ ಕ್ರಮ ಹಾಗೂ ಮಾತನಾಡುವುದು ಎಲ್ಲವೂ ಹುಡುಗಿಯರ ರೀತಿಯದ್ದಾಗಿತ್ತು. ಇದನ್ನು ಭಾರತದ ಜನರು ಇಷ್ಟಪಡುವುದಿಲ್ಲ ಎಂದು ಫೇಸ್ ಬುಕ್ ನಲ್ಲಿ ತನ್ನ ನೋವನ್ನು  ಹೇಳಿಕೊಂಡಿದ್ದಾನೆ. 
ದಯವಿಟ್ಟು, ತನ್ನ ತಂದೆ ತಾಯಿಯನ್ನು ದೂಷಿಬೇಡಿ, ಅವರಿಗೆ ಸಹಾಯ ಮಾಡಿ, ನಾವು ಬಡವರು, ತಂದೆ ತಾಯಿ ಹಾಗೂ ಸಹೋದರಿಯನ್ನು ತುಂಬಾ ಪ್ರೀತಿಸುತ್ತೇನೆ. ನನ್ನನ್ನು ಪ್ರೋತ್ಸಾಹಿಸಿದ್ದಾಗಿ ಅವರಿಗೆ ಧನ್ಯವಾದ ಹೇಳುತ್ತೇನೆ. ನಾನು ಸಲ್ಲಿಂಗಿಯಾಗಿ ಹುಟ್ಟಿದು ನನ್ನ ತಪ್ಪಲ್ಲ ಎಂದು ಬರೆದುಕೊಂಡಿದ್ದಾನೆ.
ಶೆಲೊನ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಅವಿ ಮೃತದೇಹವನ್ನು ಬೀಚ್ ನಲ್ಲಿ ಗುರುತಿಸಿದ   ಸ್ಥಳೀಯ ಜನರು,  ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ. ಮೃತದೇಹವನ್ನು  ಸರ್ಕಾರಿ ಆಸ್ಪತ್ರೆಗೆ ಪೊಲೀಸರು ರವಾನಿಸಿದ್ದು, ಆತನ ಪೋಷಕರಿಗೆ ತಿಳಿಸಿದ್ದಾರೆ.
ಅಸ್ವಾಭಾವಿಕ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಜುಲೈ 2 ರಂದು ರಾತ್ರಿ  ಮುಂಬೈನಲ್ಲಿರುವ ತನ್ನ ಸ್ನೇಹಿತರಿಗೆ ಕರೆ ಮಾಡಿದ್ದ ಅವಿ, ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸುತ್ತಿದೆ ಎಂದು ಹೇಳಿದ್ದಾನೆ. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ  ಹೇಳಿ ನಂತರ ಪೋನ್ ಸ್ವಿಚ್ ಆಪ್ ಮಾಡಿದ್ದಾಗಿ ಆತನ ಸ್ನೇಹಿತ ಮಾಸ್ಟ್ರಿ ಹೇಳಿದ್ದಾನೆ. 
ಅವಿ ಮೃತದೇಹವನ್ನು ಮುಂಬೈಗೆ ಕೊಂಡೊಯ್ಯಲು ಬಂದಿದ್ದ ಅವಿ ತಂದೆ  ಯಾವುದೇ ದೂರು ದಾಖಲಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಜುಲೈ  2 ರಂದು ರಜೆ ಪಡೆದಿದ್ದ ಅವಿ,  ಮೃತಪಟ್ಟಿರುವ ವಿಷಯವನ್ನು ಪೊಲೀಸರಿಂದ ಪಡೆದಿದ್ದಾಗಿ ಶೆಲೂನ್ ಸಿಬ್ಬಂದಿ ಹೇಳಿದ್ದಾರೆ.
ಸಲಿಂಗ ಕಾಮವನ್ನು ಸುಪ್ರೀಂಕೋರ್ಟ್ ಮಾನ್ಯತೆ ಮಾಡಿದ್ದರೂ ಆ ಸಮುದಾಯದವರು ಸಮಾಜದಿಂದ ನಿಂದನೆ, ತಾರತಮ್ಯಕ್ಕೊಳಗಾಗುತ್ತಿದ್ದಾರೆ. ಸೆಕ್ಷನ್ 377 ರದ್ದಾಗಿದ್ದರೂ ಕೂಡಾ ತೀರ್ಪಾಗಿಯೇ ಉಳಿದಿದೆ. ಇದರಿಂದಾಗಿ ಆದೆಷ್ಟೋ ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
SCROLL FOR NEXT