ದೇಶ

ಉಪಾಹಾರ ಕೂಟದಲ್ಲಿ ಬಿಜೆಪಿ ಸಂಸದೆಯರನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ

Sumana Upadhyaya
ನವದೆಹಲಿ: ಶುಕ್ರವಾರ ಬೆಳಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತೀಯ ಜನತಾ ಪಕ್ಷದ ಮಹಿಳಾ ಸಂಸದರು ಉಪಾಹಾರ ಕೂಟದಲ್ಲಿ ಭೇಟಿ ಮಾಡಿದರು. 
ಬಿಜೆಪಿಯ ಸಂಸದರನ್ನು ಏಳು ಗುಂಪುಗಳಾಗಿ ವಿಂಗಡಿಸಲಾಗಿದ್ದು ಪ್ರಧಾನಿ ಮೋದಿ ಈಗಾಗಲೇ ಒಬಿಸಿ, ಎಸ್ ಸಿ, ಎಸ್ ಟಿ ವಿಭಾಗಗಳ ಸಂಸದರನ್ನು ಮತ್ತು ಸಚಿವರನ್ನು ಪ್ರತ್ಯೇಕ ಗುಂಪುಗಳಾಗಿ ಭೇಟಿ ಮಾಡಿದ್ದರು.
ಬಿಜೆಪಿ ಸಂಸದರು ನೇರವಾಗಿ ಪ್ರಧಾನಿಯವರ ಜೊತೆ ಮಾತುಕತೆ ನಡೆಸಲು ಈ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಇಲ್ಲಿ ಹಲವು ವಿಷಯಗಳ ಕುರಿತು ಪ್ರಧಾನಿಗಳ ಜೊತೆ ಸಂಸದರು ಮಾತುಕತೆ ನಡೆಸುತ್ತಾರೆ.
ಉಪಾಹಾರ ಕೂಟದ ವೇಳೆ ಮೋದಿಯವರ ಜೊತೆ ಅನೌಪಚಾರಿಕವಾಗಿ ನೇರವಾಗಿ ಮಾತುಕತೆ ಮಾಡಲಾಗುತ್ತದೆ. ಪ್ರಧಾನಿಯವರ ಜೊತೆ ಮಾತುಕತೆ ವೇಳೆ ಗೃಹ ಸಚಿವ ಅಮಿತ್ ಶಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿಯವರು ಇರುತ್ತಾರೆ.
ಕಳೆದ 16ನೇ ಲೋಕಸಭೆಯಲ್ಲಿ ಪ್ರಧಾನಿ ಮೋದಿ ಹಲವು ರಾಜ್ಯಗಳ ಸಂಸದರನ್ನು ಸಂಸತ್ತಿನ ಪ್ರತಿ ಅಧಿವೇಶನ ಸಮಯದಲ್ಲಿ ಭೇಟಿ ಮಾಡಿ ಸರ್ಕಾರದ ಅಜೆಂಡಾ ಬಗ್ಗೆ ಚರ್ಚಿಸುತ್ತಿದ್ದರು. ಇಂದಿನ 17ನೇ ಲೋಕಸಭೆಯಲ್ಲಿ ಸಂಸತ್ತಿನ ಇತಿಹಾಸದಲ್ಲಿ ಮೊದಲ ಬಾರಿಗೆ ದಾಖಲೆಯ 78 ಸಂಸದೆಯರು ಆಯ್ಕೆಯಾಗಿದ್ದು ಅವರಲ್ಲಿ 41 ಸಂಸದೆಯರು ಬಿಜೆಪಿಯವರು.
SCROLL FOR NEXT