ದೇಶ

ಎರಡು ಕೈಯಲ್ಲಿ ಗನ್ ಹಿಡಿದು ಡ್ಯಾನ್ಸ್ ಮಾಡಿದ್ದ ಬಿಜೆಪಿ ಶಾಸಕನ ಉಚ್ಚಾಟನೆ

Lingaraj Badiger
ಡೆಹ್ರಾಡೂನ್: ಎರಡು ಕೈಯಲ್ಲಿ ಗನ್ ಗಳನ್ನು ಹಿಡಿದು ಡ್ಯಾನ್ಸ್ ಮಾಡುವ ಮೂಲಕ ಮತ್ತೆ ವಿವಾದಕ್ಕಿಡಾಗಿದ್ದ ಉತ್ತರಾಖಂ ಬಿಜೆಪಿ ಶಾಸಕ ಪ್ರಣವ್ ಸಿಂಗ್ ಚಾಂಪಿಯನ್ ಅವರನ್ನು ಶುಕ್ರವಾರ ಪಕ್ಷದಿಂದ ಉಚ್ಚಾಟಿಸಲಾಗಿದೆ.
ಬಿಜೆಪಿ ಶಾಸಕ ಪ್ರಣವ್ ತನ್ನ ಎರಡು ಕೈಯಲ್ಲಿ ಗನ್ ಗಳನ್ನು ಹಿಡಿದುಕೊಂಡು, ಅಶ್ಲೀಲ ಪದಗಳನ್ನು ಬಳಸಿ ಬೈಯುತ್ತ, ಬಾಲಿವುಡ್ ನ ಐಟಮ್ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರಿಂದ ಎಚ್ಚೆತ್ತುಕೊಂಡ ಬಿಜೆಪಿ ತನ್ನ ಶಾಸಕನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದೆ.
ಪ್ರಣವ್ ಸಿಂಗ್ ಅವರು ಕಪ್ಪು ಬಣ್ಣದ ಬನಿಯನ್ ಹಾಗೂ ಬಿಳಿ ಪ್ಯಾಂಟ್ ಧರಿಸಿ, ಎರಡೂ ಕೈಯ್ಯಲ್ಲಿ ನಾಲ್ಕು ಗನ್ ಹಿಡಿದುಕೊಂಡು, ಮೊಣಕಾಲ ಮೇಲೆ ಮದ್ಯಪಾನದ ಗ್ಲಾಸ್ ಇಟ್ಟುಕೊಂಡು, ಡ್ಯಾನ್ಸ್ ಮಾಡುತ್ತ ಪೋಸ್ ನೀಡಿದ್ದರು. ಶಾಸಕರ ಜೊತೆ ಸಹಚರರು ಸಹ ಡ್ಯಾನ್ಸ್ ಮಾಡಿದ್ದು, ಸುಮಾರು 1.45 ನಿಮಿಷಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.
SCROLL FOR NEXT