ದೇಶ

ಉದ್ಯಮ ಪಾಲುದಾರರ ವಿರುದ್ಧ ವೀರೇಂದ್ರ ಸೆಹ್ವಾಗ್ ಪತ್ನಿ ಆರತಿ ಸೆಹ್ವಾಗ್ ಪೊಲೀಸರಿಗೆ ದೂರು

Sumana Upadhyaya
ನವದೆಹಲಿ: ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರ ಪತ್ನಿ ಆರತಿ ಸೆಹ್ವಾಗ್ ತಮ್ಮ ಉದ್ಯಮ ಪಾಲುದಾರರ ವಿರುದ್ಧ ದೂರು ನೀಡಿದ್ದಾರೆ. 
ಕೃಷಿ ಆಧಾರಿತ ಕಂಪೆನಿಯ ಪಾಲುದಾರರು ತಮ್ಮ ಅರಿವಿಗೆ ಬಾರದೆಯೇ ತಮ್ಮ ಸಹಿಯನ್ನು ನಕಲಿಯಾಗಿ ಬಳಸಿ ದೆಹಲಿ ಮೂಲದ ಸಾಲಗಾರರಿಂದ ತಮ್ಮ ಸಹಿಯನ್ನು ನಕಲು ಮಾಡಿ ನಾಲ್ಕೂವರೆ ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ ಎಂದು ಆರತಿ ಸೆಹ್ವಾಗ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿಗಳಿಬ್ಬರು ತಮ್ಮ ಪತಿ ವೀರೇಂದ್ರ ಸೆಹ್ವಾಗ್ ಅವರ ಹೆಸರು ಹೇಳಿಕೊಂಡು ಸಾಲ ಕೊಡುವವರ ಮನವೊಲಿಸಿ ತಮ್ಮ ಸಹಿಯನ್ನು ನಕಲು ಮಾಡಿ ಮೂವರ ನಡುವೆ ಒಪ್ಪಂದ ಮಾಡಿಕೊಂಡರು. ಸಾಲ ನೀಡಿದವರಿಗೆ ಎರಡು ಪೋಸ್ಟ್ ಡೇಟೆಡ್ ಚೆಕ್ ನೀಡಿದ್ದಾರೆ. ಆದರೆ ನಂತರ ಹಣ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಆರತಿ ಸೆಹ್ವಾಗ್ ದೂರಿನಲ್ಲಿ ವಿವರಿಸಿದ್ದಾರೆ.
ಸಾಲ ಕೊಡಲು ವಿಫಲವಾಗಿದ್ದರಿಂದ ಸಾಲ ನೀಡಿದವರು ಕೋರ್ಟ್ ಗೆ ಮೊರೆ ಹೋಗಿದ್ದು ವಿಚಾರಣೆ ವೇಳೆ ತಮ್ಮ ಸಹಿ ಎಂದು ತಿಳಿದಾಗ ಆಘಾತವಾಯಿತು. ಆದರೆ ನಾನು ಯಾವತ್ತಿಗೂ ಸಹಿ ಮಾಡುವುದಾಗಲಿ, ಒಪ್ಪಂದ ಮಾಡಿಕೊಳ್ಳುವುದಾಗಲಿ ಮಾಡಲಿಲ್ಲ ಎಂದಿದ್ದಾರೆ.
ಆರತಿಯವರ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
SCROLL FOR NEXT