ಸಚಿವ ಸ್ಥಾನಕ್ಕೆ ಸಿಧು ರಾಜೀನಾಮೆ ಒಪ್ಪಲು ಆಗಲ್ಲ, ಶಿಸ್ತು ಮುಖ್ಯ: ಅಮರಿಂದರ್ ಸಿಂಗ್
ನವಜೋತ್ ಸಿಂಗ್ ಸಿಧು ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಸಿಧು ಇಲಾಖೆಗಳನ್ನು ಆಯ್ಕೆ ಮಾಡುಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸೈನಿಕರು ತಮಗೆ ಕೊಟ್ಟ ಕೆಲಸವನ್ನು ನಿರಾಕರಿಸುವಂತಿಲ್ಲ. ಎಲ್ಲದಕ್ಕೂ ಒಂದು ಶಿಸ್ತು ಇರಬೇಕು ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.
ಸಿಧು ರಾಜೀನಾಮೆ ಅಂಶಗಳನ್ನು ನಾನು ನೋಡಿಲ್ಲ. ಸಿಧುಗೆ ಪ್ರಮುಖ ಖಾತೆಯಾದ ಇಂಧನ ಖಾತೆಯನ್ನು ನೀಡಲಾಗಿತ್ತು. ಪಂಜಾಬ್ ವಿದ್ಯುತ್ ಕೊರತೆ ಎದುರಿಸುತ್ತಿದ್ದು ಸಮರ್ಥ ಸಚಿವರ ಅಗತ್ಯವಿತ್ತು ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಇಲಾಖೆಯಿಂದ ಸಿಧು ಅವರನ್ನು ಇಂಧನ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.