ದೇಶ

ಗುಜರಾತ್: ಮಾಜಿ ಕಾಂಗ್ರೆಸ್ ಶಾಸಕರಾದ ಅಲ್ಫೇಶ್, ಜಾಲಾ ಬಿಜೆಪಿ ಸೇರ್ಪಡೆ

Lingaraj Badiger
ಗಾಂಧಿನಗರ: ಕಾಂಗ್ರೆಸ್ ಮಾಜಿ ಶಾಸಕರಾದ ಅಲ್ಪೇಶ್ ಥಾಕೂರ್ ಹಾಗೂ ಧವಲ್ ಸಿನ್ಹಾ ಜಾಲಾ ಅವರು ಗುರುವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಇಂದು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಜೀತು ವಘಾನಿ ಅವರ ನೇತೃತ್ವದಲ್ಲಿ ಅಲ್ಪೇಶ್ ಥಾಕೂರ್ ಮತ್ತು ಧವಲ್ ಸಿನ್ಹಾ ಜಾಲಾ ಅವರು ಬಿಜೆಪಿ ಸೇರ್ಪಡೆಯಾದರು.
ಇತ್ತೀಚಿಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಿದ್ದ ಈ ಇಬ್ಬರು ಕಾಂಗ್ರೆಸ್ ನಾಯಕರು ಜುಲೈ 5ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
SCROLL FOR NEXT