ದೇಶ

ಮಧ್ಯಪ್ರದೇಶದ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಗೆ ತೀವ್ರ ಮುಜುಗರ!

Srinivas Rao BV
ಭೋಪಾಲ್: ಮಧ್ಯಪ್ರದೇಶದ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಗೆ ತೀವ್ರ ಮುಜುಗರ ಉಂಟಾಗಿದೆ. 
ಕಾಂಗ್ರೆಸ್ ನಾಯಕನ ಕೊಲೆ ಪ್ರಕರಣದ ಪ್ರಮುಖ ಆರೋಪಿ ವಿಧಾನಸೌಧದ ಒಳಗೆ ರಾಜಾರೋಷವಾಗಿ ಓಡಾಡುತ್ತಿದ್ದದ್ದು ದಾಖಲಾಗಿದ್ದು ಆಡಳಿತ ಪಕ್ಷದ ನಾಯಕರು ತಲೆ ತಗ್ಗಿಸುವಂತಾಗಿದೆ. 
ಮಧ್ಯಪ್ರದೇಶದಲ್ಲಿ ಬಿಎಸ್ ಪಿ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಿದ್ದು ಬಿಎಸ್ ಪಿ ಶಾಸಕಿಯ ಪತ್ನಿ ಕೊಲೆ ಆರೋಪಿಯಾಗಿದ್ದಾನೆ. ಕಳೆದ 4 ತಿಂಗಳಿನಿಂದ ಕೊಲೆ ಆರೋಪಿ ಗೋವಿಂದ್ ಸಿಂಗ್ ಠಾಕೂರ್ ಬಂಧನಕ್ಕೆ ವಾರೆಂಟ್ ಜಾರಿ ಮಾಡಲಾಗಿದೆ. ಬಂಧಿಸಿದ ಅಧಿಕಾರಿಗೆ 25,000 ರೂಪಾಯಿ ಬಹುಮಾನವನ್ನೂ ಘೋಷಣೆ ಮಾಡಲಾಗಿತ್ತು. ಬಹುಮಾನ ಘೋಷಣೆ ಮಾಡಿರುವುದು ಪಕ್ಷದ ಒಳಗೆ ತೀವ್ರ ವಿರೋಧಕ್ಕೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಆ ಮೊತ್ತವನ್ನು ವಾಪಸ್ ಪಡೆದಿತ್ತು.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷ ತೊರೆದು ಕಾಂಗ್ರೆಸ್ ಗೆ ಸೇರಿದ್ದ ದೇವೇಂದ್ರ ಚೌರಾಸಿಯಾ ಎಂಬ ಮಾಜಿ ಬಿಎಸ್ ಪಿ ನಾಯಕನನ್ನು ಲೋಕಸಭಾ ಚುನಾವಣೆಗೂ ಮುನ್ನ ಹತ್ಯೆ ಮಾಡಲಾಗಿತ್ತು. ಕಮಲ್ ನಾಥ್ ನೇತೃತ್ವದ ಸರ್ಕಾರ ಕೊಲೆ ಆರೋಪಿಯನ್ನು ರಕ್ಷಿಸಲು ಯತ್ನಿಸುತ್ತಿದೆ ಎಂದು ಮೃತನ ಪುತ್ರ ಸೋಮೇಶ್ ಚೌರಾಸಿಯಾ ಆರೋಪಿಸಿದ್ದಾರೆ. 
SCROLL FOR NEXT