ದೇಶ

ಲೋಕಸಭೆಯಲ್ಲಿ ಆರ್ ಟಿಐ ತಿದ್ದುಪಡಿ ಮಸೂದೆ ಅಂಗೀಕಾರ

Srinivas Rao BV
ನವದೆಹಲಿ: ಲೋಕಸಭೆಯಲ್ಲಿ ಜು.22 ರಂದು ಆರ್ ಟಿಐ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲಾಗಿದೆ. 
ಸ್ಪೀಕರ್ ಮಸೂದೆಯನ್ನು ಧ್ವನಿ ಮತಕ್ಕೆ ಹಾಕಿದ್ದು ಮಸೂದೆ ಅಂಗೀಕಾರವಾಗಿದೆ.  ತಿದ್ದುಪಡಿ ಮಸೂದೆಯ ಪ್ರಕಾರ ರಾಜ್ಯ ಹಾಗೂ ಕೇಂದ್ರ ಮಾಹಿತಿ ಆಯುಕ್ತರ ಕಾರ್ಯಾವಧಿ ಹಾಗೂ ವೇತನವನ್ನು  ನಿರ್ಧರಿಸುವ ಅಧಿಕಾರ ಕೇಂದ್ರಕ್ಕೆ ಸಿಗಲಿದೆ. 
ತಿದ್ದುಪಡಿ ಮಸೂದೆಯನ್ನು ವಿರೋಧಿಸಿರುವ ಪ್ರತಿಪಕ್ಷಗಳು  ತಿದ್ದುಪಡಿ ಮಸೂದೆಯಿಂದ ಆರ್ ಟಿಐ ಪರಿಣಾಮಕಾರಿತ್ವ ಕಳೆದುಕೊಳ್ಳಲಿದೆ ಎಂದು ಆರೋಪಿಸಿವೆ.
SCROLL FOR NEXT