ದೇಶ

ಮೋದಿ 2.0 ಸರ್ಕಾರ: ಮೊದಲ 50 ದಿನದಲ್ಲಿ ರಕ್ಷಣಾ ಕ್ಷೇತ್ರಕ್ಕೆ 8500 ಕೋಟಿ ವೆಚ್ಚ

Nagaraja AB
ನವದೆಹಲಿ: ಮೋದಿ 2.0 ಸರ್ಕಾರದ ಮೊದಲ 50 ದಿನದಲ್ಲೇ ರಕ್ಷಣಾ ಕ್ಷೇತ್ರಕ್ಕೆ ಈಗಾಗಲೇ 8500 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.  ಭಾರತೀಯ ಸೇನೆ ಮತ್ತು ವಾಯುಪಡೆಯ ಕ್ಷಿಪಣಿಗಳು ಮತ್ತು ಬಿಡಿಭಾಗಗಳು ಸೇರಿದಂತೆ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಖರೀದಿಗಾಗಿ  ಭಾರಿ ಮೊತ್ತವನ್ನು ವ್ಯಯಿಸಲಾಗಿದೆ. 
ಸ್ಪೈಸ್ -2000 ಕ್ಷಿಪಣಿಗಳು, ಸ್ಟ್ರಮ್ ಅಟಾಕಾ ಎಟಿಜಿಎಂಗಳು ಮತ್ತು ಹೆಚ್ಚಿನ ಸಂಖ್ಯೆಯ ಬಿಡಿಭಾಗಗಳ ಖರೀದಿಗಾಗಿ  ಭಾರತೀಯ ವಾಯುಪಡೆ 8 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಿದೆ ಎಂಬುದು  ರಕ್ಷಣಾ ಸಚಿವಾಲಯ ಮೂಲಗಳಿಂದ ತಿಳಿದುಬಂದಿದೆ.
2019ರ ಲೋಕಸಭಾ ಚುನಾವಣೆಗೂ ಮುಂಚಿತವಾಗಿ ಘೋಷಿಲಾಗಿದ್ದ ಕೆಲ ಯೋಜನೆಗಳನ್ನು ಸರ್ಕಾರ ರಚನೆಯಾದ ಬಳಿಕ ಜಾರಿಗೆ ತರಲಾಗುತ್ತಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. 
ಪುಲ್ವಾಮಾ ದಾಳಿಯ ಬಳಿಕ  ಪಾಕಿಸ್ತಾನದ ಗಡಿ ಭಾಗದಲ್ಲಿ ಭದ್ರತೆಗಾಗಿ ತುರ್ತು ಸೇವೆಯ ಅಧಿಕಾರದಡಿಯಲ್ಲಿ  ಕೇಂದ್ರ ಸರ್ಕಾರ ಅಗತ್ಯವಾದ ರಕ್ಷಣೋಪಕರಣಗಳನ್ನು  ಖರೀದಿಸಿತು. ಈ ಅಧಿಕಾರದಡಿಯಲ್ಲಿ ಭದ್ರತಾ ಪಡೆಗಳು ಮೂರು ತಿಂಗಳೊಳಗೆ ಸುಮಾರು 300 ಕೋಟಿ ರೂಪಾಯಿ ವೆಚ್ಚದ ಸಾಧನ ಉಪಕರಣಗಳನ್ನು ಖರೀದಿಸಬಹುದಾಗಿದೆ.
SCROLL FOR NEXT