ಮುಂಬಯಿ: ಮುಂಬಯಿ ಎನ್ ಸಿಪಿ ಅಧ್ಯಕ್ಷ ಸಚಿನ್ ಅಹಿರ್ ಗುರುವಾರ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಶಿವಸೇನೆ ಸೇರ್ಪಡೆಯಾಗಿದ್ದಾರೆ.
ಶಿವಸೇನೆ ಸೇರುವ ಮುನ್ನ, ಉದ್ಧವ್ ಠಾಕ್ರೆ ಮತ್ತು ಆದಿತ್ಯ ಠಾಕ್ರೆ ಅವರನ್ನು ಭೇಟಿ ಮಾಡಿ ನಂತರ ಸೇರ್ಪಡೆಯಾದರು. ಸಚಿನ್ ಅಹಿರ್ ಎನ್ ಸಿ ಪಿ ತೊರೆದ ಹಿನ್ನೆಲೆಯಲ್ಲಿ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ.
2009ರಿಂದ 2014 ರವರೆಗೆ ಎನ್ ಸಿ ಪಿ ಕಾಂಗ್ರೆಸ್ ಸರ್ಕಾರವಿದ್ದಾಗ ಸಚಿನ್ ಅಹಿರ್ ಮಂತ್ರಿಯಾಗಿದ್ದರು. ಎನ್ ಸಿಪಿ ಮುಖಂಡ ಶರದ್ ಪವಾರ್ ಅವರಿಗೆ ಆಪ್ತರಾಗಿದ್ದ ಅಹಿರ್ ಮುಂಬಯಿ ವರ್ಲಿ ಕ್ಷೇತ್ರದಿಂದ ಆರಿಸಿ ಬಂದಿದ್ದರು.