ಸುಪ್ರೀಂಕೋರ್ಟ್ 
ದೇಶ

ಪೋಕ್ಸೊ ಪ್ರಕರಣಗಳ ವಿಚಾರಣೆಗೆ ಜಿಲ್ಲಾಮಟ್ಟದ ವಿಷೇಷ ನ್ಯಾಯಾಲಯ ಸ್ಥಾಪಿಸಿ: ಕೇಂದ್ರಕ್ಕೆ ಸುಪ್ರೀಂ ಸೂಚನೆ

ದೇಶದಲ್ಲಿ ಲೈಂಗಿಕ ಅಪರಾಧದಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿ 100 ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇರುವ ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.

ನವದೆಹಲಿ: ದೇಶದಲ್ಲಿ ಲೈಂಗಿಕ ಅಪರಾಧದಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿ 100 ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇರುವ ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ತ್ರಿಸದಸ್ಯ ಪೀಠ, ವಿಶೇಷ ನ್ಯಾಯಾಲಯಗಳಿಗೆ ಕೇಂದ್ರ ಸರ್ಕಾರದಿಂದ ಅನುದಾನ ದೊರೆಯಲಿದ್ದು, ತ್ವರಿತ ವಿಚಾರಣೆಯ ಹಿನ್ನೆಲೆಯಲ್ಲಿ 60 ದಿನಗಳೊಳಗೆ ನ್ಯಾಯಾಲಯ ಸ್ಥಾಪಿಸುವಂತೆ ನಿರ್ದೇಶನ ನೀಡಿದೆ.
ಪೋಕ್ಸೋ ನ್ಯಾಯಾಲಯಗಳ ಸ್ಥಾಪನೆಗೆ ಅನುದಾನ ನೀಡುವ ಜೊತೆಗೆ, ವಕೀಲರು, ವಿಚಾರಣಾಧಿಕಾರಿಗಳನ್ನು ನೇಮಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿರುವ ನ್ಯಾಯಪೀಠ, ಈ ಸಂಬಂಧ ನಾಲ್ಕು ವಾರಗಳಲ್ಲಿ ಪ್ರಗತಿ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ. 
 ದೇಶದಲ್ಲಿ ಹೆಚ್ಚುತ್ತಿರುವ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳ ಸಂಬಂಧ ಸ್ವಯಂ ಪ್ರೇರಿತ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಪೀಠ ಈ ಆದೇಶ ನೀಡಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಶ್ಚಿಮ ಏಷ್ಯಾ ಸಂಘರ್ಷ: ಗಲ್ಫ್‌ನಲ್ಲಿ ಆರು ಭಾರತೀಯರು ಸಾವು, ಒಬ್ಬರು ನಾಪತ್ತೆ; MEA

ಯುದ್ಧವನ್ನು ತಕ್ಷಣವೇ ಕೊನೆಗೊಳಿಸಬೇಕು; ಇದು ಇರಾನ್ ವಿರುದ್ಧ ಅಮೆರಿಕ, ಇಸ್ರೇಲ್‌ನ ಅಪ್ರಚೋದಿತ ಆಕ್ರಮಣ: ರಷ್ಯಾ

ಹಾರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಿಸುತ್ತಿದ್ದ ಭಾರತದ ಹಡಗಿನ ಕ್ಯಾಪ್ಟನ್ ಸಾವು: ಕುಟುಂಬ ಹೇಳಿದ್ದೇನು?

ಧುರಂಧರ್ 2 ಆರ್ಭಟಕ್ಕೆ ಬಾಲಿವುಡ್ ದಾಖಲೆಗಳು ಧೂಳಿಪಟ: ಮೊದಲ ದಿನವೇ ರಣವೀರ್ ಸಿಂಗ್ ಚಿತ್ರ ಗಳಿಸಿದ್ದು ದಾಖಲೆಯ 240 ಕೋಟಿ!

Ranveer Singh’s Dhurandhar 2: ಥಿಯೇಟರ್ ಗೆ ಹೋಗಿ ಸಮಯ, ದುಡ್ಡು ವ್ಯರ್ಥ ಮಾಡಬೇಡಿ: ರಮ್ಯಾ ಫೋಸ್ಟ್!

SCROLL FOR NEXT