ಇನ್ನೊಮ್ಮೆ ಯುದ್ಧ ಸಾರಿದರೆ ರಕ್ತದ ಕೋಡಿ ಹರಿಸುತ್ತೇವೆ; ಪಾಕ್ ಗೆ ಬಿಪಿನ್ ರಾವತ್ ಎಚ್ಚರಿಕೆ
ನವದೆಹಲಿ: ದೇಶಾದ್ಯಂತ 20ನೇ ಕಾರ್ಗಿಲ್ ವಿಜಯ ದಿನ ಆಚರಿಸುತ್ತಿರುವ ಬೆನ್ನಲ್ಲೇ, ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಭಾರತದೊಂದಿಗೆ ಮತ್ತೊಂದು ಯುದ್ಧಕ್ಕೆ ಮುಂದಾದಲ್ಲಿ ರಕ್ತದ ಕೋಡಿ ಹರಿಸುವುದಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನಕ್ಕೆ ಸಂದೇಶ ರವಾನಿಸಿದ ಅವರು, ಇದೊಂದು ತಪ್ಪಾದ ಸಾಹಸವಾಗಿತ್ತು. ತಪ್ಪು ಸಾಹಸಗಳನ್ನು ಸಹಜವಾಗಿ ಪುನಾರಾವರ್ತಿಸುವುದಿಲ್ಲ. ಮುಂದಿನ ಬಾರಿ ನಿಮಗೆ ರಕ್ತಪಾತವೇ ಎದುರಾಗಲಿದೆ ಎಂದರು. ದೇಶದ ಜನರಿಗೆ ತಾವು, ಸೇನೆಗೆ ಯಾವುದೇ ಕೆಲಸ ನೀಡಲಿ, ಅದೆಷ್ಟೇ ಕಷ್ಟದ್ದಾಗಿರಲಿ, ಅದನ್ನು ಅವರು ಬದ್ಧತೆಯಿಂದ ಪೂರ್ಣಗೊಳಿಸುತ್ತಾರೆ. ನಮ್ಮ ಸೈನಿಕರು ಗಡಿ ಹಾಗೂ ದೇಶದ ಜನರನ್ನು ಕಾಯುವ ಕೆಲಸವನ್ನು ಮುಂದುವರಿಸಲಿದ್ದಾರೆ ಎಂದರು.
ಕಾರ್ಗಿಲ್ ಯುದ್ಧದ ಆರಂಭದಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು, ಭಾರತೀಯ ಸೇನೆಗೆ ದೇಶದೊಳಗೆ ಅಕ್ರಮವಾಗಿ ನುಸುಳಿದವರನ್ನು ತೆರವುಗೊಳಿಸುವಂತೆ ಸೂಚಿಸಿದ್ದರು. ಆಗ ಅವರು, ಗೆಲುವು ನಮ್ಮದೇ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ನಮ್ಮ ಸೇನೆ ಅವರ ವಿಶ್ವಾಸವನ್ನು ಹುಸಿಗೊಳಿಸಲಿಲ್ಲ ಎಂದು ರಾವತ್ ಸ್ಮರಿಸಿದರು.
ಮಂಜಿನ ಶಿಖರಗಳು ಹಾಗೂ ಕಠಿಣ ಪರಿಸ್ಥಿತಿಯ ನಡುವೆಯೂ ಯೋಧರು ತಮ್ಮ ಛಲವನ್ನು ಬಿಡಲಿಲ್ಲ. ಅವರಿಗೆ ಭಾರತೀಯ ಸೇನೆಯ ಘನತೆಯನ್ನು ಎತ್ತಿಹಿಡಿಯುವ ಧ್ಯೇಯವಿತ್ತು ಎಂದರು. ನಂತರ ಅವರು, ಯುದ್ಧದಲ್ಲಿ ಹುತಾತ್ಮರಾದವರು, ಗಾಯಗೊಂಡವರು ಹಾಗೂ ಸೇನೆಯಲ್ಲಿ ಹೋರಾಡಿದ, ಬೆಂಬಲಿಸಿದ ಪ್ರತಿಯೊಬ್ಬರಿಗೆ ಗೌರವ ಸೂಚಿಸಿದರು. ಸೇನೆಯನ್ನು ಆಧುನೀಕರಿಸುವ ಕುರಿತು ಮಾತನಾಡಿದ ಅವರು, ತಾವು ಶಸ್ತ್ರಾಸ್ತ್ರಗಳ ಆಧುನೀಕರಣಕ್ಕೆ ಯೋಜಿಸಿದ್ದು, ಫಿರಂಗಿಗಳ ಮೇಲೆ ಹೆಚ್ಚಿನ ಗಮನ ಹರಿಸಿದ್ದೇವೆ. 2020ರ ವೇಳೆಗೆ ಹೋವಿಟ್ಜರ್ಸ್ ಅನ್ನು ಪಡೆಯಲಿದ್ದೇವೆ. ತಾವು ದಕ್ಷಿಣ ಕೊರಿಯಾದ ಸಹಯೋಗದೊಂದಿಗೆ ಕೆ-9 ವಜ್ರವನ್ನು ತಯಾರಿಸುತ್ತಿದ್ದೇವೆ. ದೇಶಿಯವಾಗಿ ಬಂದೂಕಿನಂತಹ ಎರಡು ಅಸ್ತ್ರಗಳನ್ನು ತಯಾರಿಸಲಾಗುತ್ತಿದೆ ಎಂದರು.
1999ರ ಜುಲೈ 26ರಂದು ಕಾರ್ಗಿಲ್ ಮೇಲೆ ಆಕ್ರಮಣ ನಡೆಸಿದ್ದ ಪಾಕ್ ಸೇನೆಯನ್ನು ಭಾರತೀಯ ಸೇನೆ ಸೋಲಿಸಿತ್ತು. ಮೂರು ತಿಂಗಳ ಕಾಲ ನಡೆದ ಯುದ್ಧದಲ್ಲಿ 527ಕ್ಕೂ ಹೆಚ್ಚು ಭಾರತೀಯ ಯೋಧರು ಹುತಾತ್ಮರಾದರು. ಇವರ ಸ್ಮರಣಾರ್ಥ ಡ್ರಾಸ್ ನಲ್ಲಿ 500 ಸಮಾದಿಗಳನ್ನು ಸ್ಥಾಪಿಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos