ದೇಶ

ಕೇರಳ: ದಲಿತ ಶಾಸಕಿ ಪ್ರತಿಭಟನೆ ನಂತರ ಸಗಣಿ ನೀರು ಸಿಂಪಡಿಸಿ ಕಚೇರಿ ಶುದ್ದೀಕರಿಸಿದ ಕಾಂಗ್ರೆಸ್!

Raghavendra Adiga
ತಿರುವನಂತಪುರಂ: ದಲಿತ ಶಾಸಕಿಯೊಬ್ಬರು ಪ್ರತಿಭಟನೆ ನಡೆಸಿದ್ದರೆಂಬ ಕಾರಣಕ್ಕೆ ಯುವ ಕಾಂಗ್ರೆಸ್ ಕಾರ್ಯಕರ್ತರು ಸಗಣಿ ನೀರು ಸಿಂಪಡಿಸಿ  ಪಿಡಬ್ಲ್ಯುಡಿ ಕಚೇರಿಯನ್ನು ಶುದ್ಧೀಕರಿಸಿರುವ ವಿಲಕ್ಷಣ ಘಟನೆ ಕೇರಳದಲ್ಲಿ ನಡೆದಿದೆ.
ಕೇರಳದ ತ್ರಿಶೂರ್ ಜಿಲ್ಲೆಯ ನಾಟಿಕಾ ವಿಧಾನಸಭೆ ಕ್ಷೇತ್ರದ ಸಿಪಿಐ ದಲಿತ ಶಾಸಕಿ ಗೀತಾ ಗೋಪಿ ಶನಿವಾರ ತಮ್ಮ ಕ್ಷೇತ್ರದ ರಸ್ತೆಗಳ ದುರವಸ್ಥೆಯನ್ನು ಖಂಡಿಸಿ ಪಿಡಬ್ಲ್ಯುಡಿ ಕಚೇರಿ ಎದುರು ಧರಣಿ ನಡೆಸಿದ್ದರು. ಆ ವೇಳೆ ರಸ್ತೆ ಸರಿಪಡಿಸಲು ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಅವರು ತಮ್ಮ ಪ್ರತಿಭಟನೆ ಹಿಂಪಡೆದಿದ್ದರು.
ಆದರೆ ಶಾಸಕಿ ಕಚೇರಿಯಿಂದ ಹೊರಬಂದ ನಂತರ ಯುವ ಕಾಂಗ್ರೆಸ್ ಕಾರ್ಯಕರ್ತರು ಕಚೇರಿಗೆ ಸಗಣಿ ನೀರು ಸಿಂಪಡಿಸಿ "ಶುದ್ಧೀಕರಣ" ಆಚರಣೆಗಳನ್ನು  ನಡೆಸಿದ್ದಾರೆ.
ಈ ಸಂಬಂಧ ಶಾಸಕಿ ಪೋಲೀಸರಿಗೆ ದೂರಿತ್ತಿದ್ದು ಯುವ ಕಾಂಗ್ರೆಸ್ ಕಾರ್ಯಕರ್ತರು ಜಾತಿ ಆಧಾರಿತ ತಾರತಮ್ಯ ಮತ್ತು ನಿಂದನೆ ಮಾಡಿದ್ದಾಗಿ ದೂರಿನಲ್ಲಿ ಹೇಳಲಾಗಿದೆ.
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಯುವ ಕಾಂಗ್ರೆಸ್ ಅಧ್ಯಕ್ಷ ಡೀನ್ ಕುರಿಯಾಕೋಸ್ ಜಾತಿ ಆಧಾರಿತ ತಾರತಮ್ಯ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
SCROLL FOR NEXT