ದೇಶ

ವಿವಿಐಪಿ ಹೆಲಿಕಾಪ್ಟರ್ ಹಗರಣ: ಕಮಲ್ ನಾಥ್ ಸೋದರಳಿಯನಿಗೆ ಸೇರಿದ 254 ಕೋಟಿ ರೂ. ಬೇನಾಮಿ ಆಸ್ತಿ ಜಪ್ತಿ

Lingaraj Badiger
ನವದೆಹಲಿ: ಅಗಸ್ಟಾ ವೆಸ್ಟ್ ​ ಲ್ಯಾಂಡ್ ವಿವಿಐಪಿ​ ಹೆಲಿಕಾಪ್ಟರ್ ಖರೀದಿ ಹಗರಣದ ಆರೋಪಿ, ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಅವರ ಸೋದರಳಿಯ ರತುಲ್ ಪುರಿ ಹಾಗೂ ಆತನ ಕಂಪನಿಯ 254 ಕೋಟಿ ರೂ.ಗಳ ಬೇನಾಮಿ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆಯ ಬೇನಾಮಿ ಆಸ್ತಿ ನಿಷೇಧ ಘಟಕ ಮುಟ್ಟುಗೋಲು ಹಾಕಿಕೊಂಡಿದೆ.
ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ಆಸ್ತಿಗಳಲ್ಲಿ ಈಕ್ವಿಟಿ ಷೇರುಗಳು ಇವೆ ಎಂದು ಆದಾಯ ತೆರಿಗೆ ಇಲಾಖೆ  ಅಧಿಕಾರಿಗಳು ಹೇಳಿದ್ದಾರೆ. 
ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಪ್ರಮುಖ ಆರೋಪಿ ರಾಜೇಶ್ ಸಕ್ಸೇನಾ ಅವರ ಮೂಲಕ ಲಂಚದ ಹಣವನ್ನು ಎಫ್ ಡಿ ಐ ರೂಪದಲ್ಲಿ ದೇಶಕ್ಕೆ ತಂದಿದ್ದಾರೆ ಎಂದು ಐಟಿ ಇಲಾಖೆ ದೂರಿದೆ.
ಅಗಸ್ಟಾ ವೆಸ್ಟ್ ಲ್ಯಾಂಡ್  ಒಪ್ಪಂದದಲ್ಲಿ ಸಂಗ್ರಹಿಸಲಾದ ಲಂಚದ ಹಣವನ್ನು ಬೇರೆ ಕಡೆ ಸಾಗಿಸುವಲ್ಲಿ ರತುಲ್ ಪುರಿಯ ಪಾತ್ರದ ಬಗ್ಗೆ ಆದಾಯ ತೆರಿಗೆ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು  ವಿಚಾರಣೆ ನಡೆಸುತ್ತಿದ್ದಾರೆ. 
ಕಾಂಗ್ರೆಸ್ ನಾಯಕ  ಕಮಲ್ ನಾಥ್ ಸಂಬಂಧಿಯಾಗಿರುವ ಕಾರಣ ತಮಗೆ ಇಡಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ರತುಲ್ ಪುರಿ ಜುಲೈ  27ರಂದು ನಿರೀಕ್ಷಣಾ ಜಾಮೀನಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಮತ್ತೊಂದೆಡೆ ರತುಲ್ ಪುರಿ ಅವರು ತನಿಖೆಗೆ ಸೂಕ್ತವಾಗಿ  ಸಹಕರಿಸುತ್ತಿಲ್ಲ ಮತ್ತು ಸೂಕ್ತ ಮಾಹಿತಿ ನೀಡುತ್ತಿಲ್ಲ ಎಂದು ತನಿಖಾ ಸಂಸ್ಥೆಯ ಅಧಿಕಾರಿಗಳು ದೂರಿದ್ದಾರೆ.
ರತುಲ್ ಪುರಿ ಜಾಮೀನು ಅರ್ಜಿಯನ್ನು  ದೆಹಲಿ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.
SCROLL FOR NEXT