ಸಂಗ್ರಹ ಚಿತ್ರ 
ದೇಶ

ಬೇಸಿಗೆ ಧಗೆಗೆ ತತ್ತರಿಸಿದ ರಾಜಸ್ಥಾನ; ತಾಪಮಾನದ ಹೊಸ ದಾಖಲೆ, 50.8 ಡಿಗ್ರಿಗೆ ಏರಿದ ಉಷ್ಣಾಂಶ

ಬೇಸಿಗೆ ಧಗೆಗೆ ಉತ್ತರ ಭಾರತದ ರಾಜ್ಯಗಳು ತತ್ತರಿಸಿದ್ದು, ರಾಜಸ್ತಾನದಲ್ಲಿ ತಾಪಮಾನ ಹೊಸ ದಾಖಲೆ ಮಟ್ಟ ತಲುಪಿದೆ.

ಜೈಪುರ: ಬೇಸಿಗೆ ಧಗೆಗೆ ಉತ್ತರ ಭಾರತದ ರಾಜ್ಯಗಳು ತತ್ತರಿಸಿದ್ದು, ರಾಜಸ್ತಾನದಲ್ಲಿ ತಾಪಮಾನ ಹೊಸ ದಾಖಲೆ ಮಟ್ಟ ತಲುಪಿದೆ.
ರಾಜಸ್ಥಾನದಾದ್ಯಂತ ಬಿಸಿಲ ಬೇಗೆ ಮಿತಿ ಮೀರಿದ್ದು, ರಾಜಸ್ಥಾನದ ಚುರುವಿನಲ್ಲಿ ತಾಪಮಾನ 50.8 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದೆ. ರಾಜಸ್ತಾನದ ಇತಿಹಾಸದಲ್ಲಿ ಇದು ಹೊಸ ದಾಖಲೆಯಾಗಿದ್ದು, ಈ ಹಿಂದೆ ಅಂದರೆ 2016ರ ಮೇ 19ರಂದು ಚುರುನಲ್ಲಿ ಶನಿವಾರ 50.2 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿತ್ತು. ಇದು ಈವರೆಗಿನ ದಾಖಲೆಯಾಗಿತ್ತು. ಆದರೆ ಇಂದು ಅದನ್ನೂ ಮೀರಿದ ಉಷ್ಣಾಂಶ ದಾಖಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಹವಾಮಾನ ಇಲಾಖೆ ಅಧಿಕಾರಿಗಳು, 'ಪಶ್ಚಿಮ ರಾಜಸ್ಥಾನ ಮತ್ತು ಪೂರ್ವ ರಾಜಸ್ಥಾನದಲ್ಲಿ ಮುಂದಿನ 5 ದಿನ ಕಟ್ಟೆಚ್ಚರದಿಂದ ಇರುವಂತೆ ತಿಳಿಸಿದ್ದಾರೆ. ಅಂತೆಯೇ ಪಶ್ಚಿಮ ರಾಜಸ್ಥಾನದ ಜೈಸಲ್ಮೇರ್​, ಬಾರ್ಮರ್​, ನಾಗೌರ್​, ಬಿಕನೇರ್​, ಹನುಮಾನ್ ​ಗಢ, ಚುರು, ಜೋಧ್ ​ಪುರ್​, ಜಾಲೋರ್​, ಅಜ್ಮೀರ್​, ಅಳ್ವಾರ್​, ಭರತ್​ಪುರ್​, ಬರಾನ್​, ಬುಂಡಿ, ದೌಸಾ, ಢೋಲ್​ಪುರ್​, ಜೈಪುರ್​, ಚಿತ್ತೋರ್ ಘಡ, ಜಲ್ವಾರ್​, ಜುಂಜುನು, ಕರೌಲಿ, ಕೋಟ, ಶಿಖರ್​, ಸವಾಯ್​ ಮಾಧೋಪುರ್, ಟೋಂಕ್ ಮತ್ತು ಪಾಲಿಯಲ್ಲಿ ಜೂ.4ರವರೆಗೆ ಒಣಹವೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

‘ಸ್ಸಾರಿ ಅಮ್ಮ-ಅಪ್ಪಾ': ಕೊರಿಯನ್ ಗೇಮ್ಸ್ ಚಟಕ್ಕೆ ಬಿದ್ದು ಡೆತ್ ನೋಟ್ ಬರೆದಿಟ್ಟು ಮೂವರು ಸೋದರಿಯರು ಆತ್ಮಹತ್ಯೆ-Video

ಹೊಸ ವ್ಯಾಪಾರ ಒಪ್ಪಂದ: US ಸರಕುಗಳು ಅಗ್ಗದ ದರದಲ್ಲಿ ಭಾರತದ ಮಾರುಕಟ್ಟೆಗೆ ಲಗ್ಗೆ, ನಮ್ಮ ರೈತರು ಏನು ಮಾಡ್ಬೇಕು? ಸಂಜಯ್ ರಾವತ್ Video

ಜ್ಯೋತಿಷಿ ಕಮಲಾಕರ್ ಭಟ್ ಅಕ್ರಮ ಸಂಬಂಧ: ವ್ಯಕ್ತಿಯ ಹತ್ಯೆ, MLA ಸುರೇಶ್ ಕುಮಾರ್ ನೈತಿಕ ಹೊಣೆ ಹೊರಬೇಕು, ಇದೇನಿದು ಹರಿಪ್ರಸಾದ್ ಆರೋಪ?

ಹಿಂದೂ ಧರ್ಮ, ಹಿಂದೂಗಳು, ಹಿಂದೂಗಳ ಆಚರಣೆಗಳು ಅಂದರೆ ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಯಾಕಿಷ್ಟು ಅಸಡ್ಡೆ? ಯಾಕಿಷ್ಟು ದ್ವೇಷ?

ಆಸ್ಟ್ರೇಲಿಯಾದಲ್ಲಿ ಗಾಂಧಿ ಪ್ರತಿಮೆ ಕಳ್ಳತನ: ಭಾರತದ ಖಂಡನೆ, ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

SCROLL FOR NEXT