ಕೊಲ್ಕೊತಾ: ಭಾರತೀಯ ಜನತಾ ಪಕ್ಷ ಜೈ ಶ್ರೀ ರಾಮ್ ಎಂಬ ಘೋಷವಾಕ್ಯವನ್ನು ಪಕ್ಷದ ಸ್ಲೋಗನ್ ಆಗಿ ಬಳಸುವುದರ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ನಾವು ಜನರ ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕೆ ಹೋರತು ಧರ್ಮದ ಜೊತೆಯಲ್ಲಿ ರಾಜಕೀಯ ಬೆರೆಸಬಾರದು ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆ ಸಮಯದಿಂದಲೂ ಜೈ ಶ್ರೀರಾಮ್ ಘೋಷಕ್ಕೆ ಸಂಬಂಧಿಸಿದಂತೆ ಸಂಘರ್ಷ ನಡೆಯುತ್ತಲೇ ಬಂದಿದೆ. ಚುನಾವಣೆ ಪ್ರಚಾರದ ಸಂದರ್ಭದಲ್ಲಿ 'ಜೈ ಶ್ರೀರಾಮ್' ಘೋಷಣೆ ಕೂಗಿದ್ದವರ ವಿರುದ್ಧ ಸಿಡಿಮಿಡಿಗೊಂಡಿದ್ದ ಮಮತಾ ಅವರನ್ನು ಬಂಧನಕ್ಕೊಳಪಡಿಸಿದ್ದರು. ಕಳೆದ ವಾರವೂ ತಾವು ಸಾಗುವ ಮಾರ್ಗದಲ್ಲಿ ಇಂತಹ ಘೋಷಣೆ ಕೂಗುತ್ತಿದ್ದ ವ್ಯಕ್ತಿ ವಿರುದ್ಧ ಸಿಟ್ಟಿಗೆದ್ದಿದ್ದಾರೆ.
ಯಾವುದೇ ರ್ಯಾಲಿಯಲ್ಲಿ ಪಕ್ಷವೊಂದು ತನ್ನ ನಿರ್ಧಿಷ್ಟ ಸ್ಲೋಗನ್ ಕೂಗಲು ನನ್ನದು ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.
ಪ್ರತಿ ರಾಜಕೀಯ ಪಕ್ಷಕ್ಕೂ ತನ್ನದೇ ಆದ ಘೋಷ ವಾಕ್ಯವಿರುತ್ತದೆ. ಆದರೆ ಬಿಜೆಪಿ ಧರ್ಮದ ಸ್ಲೋಗನ್ ಬಳಸುತ್ತಿದೆ, ಇದರಿಂದ ಧರ್ಮಕ್ಕೆ ರಾಜಕೀಯವನ್ನು ಮಿಕ್ಸ್ ಮಾಡುತ್ತಿದೆ ಎಂದು ದೂರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics