ದೇಶ

ಅತ್ಯಂತ ದುಬಾರಿ ಲೋಕಸಭೆ ಚುನಾವಣೆ: ಬಿಜೆಪಿಯಿಂದಲೇ ದಾಖಲೆ ವೆಚ್ಚ; ಒಂದು ಮತಕ್ಕೆ ಆಗಿರುವ ಖರ್ಚು ಎಷ್ಟು ಗೊತ್ತೇ?

Shilpa D
ನವದೆಹಲಿ: 2019ರ ಲೋಕಸಭೆ ಚುನಾವಣಾ ಜಗತ್ತಿನಲ್ಲಿಯೇ ಅತ್ಯಂತ ದುಬಾರಿ ಜನತಂತ್ರದ ಹಬ್ಬ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ, 
ಕಳೆದ 20 ವರ್ಷಗಳಿಗೆ ಹೋಲಿಸಿದರೇ ಈ ಬಾರಿಯ ಚುನಾವಣಾ ವೆಚ್ಚ ಸುಮಾರು ಆರು ಪಟ್ಟು ಹೆಚ್ಚಾಗಿದೆ. 1998  ರಲ್ಲಿ 9ಸಾವಿರ ಕೋಟಿ ರು ಇದ್ದದ್ದು 2019  ರಲ್ಲಿ ಸುಮಾರು 55 ಸಾವಿರ ಕೋಟಿ ರು ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ.
ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ವರದಿ ಪ್ರಕಾರ, ಒಟ್ಟು ಆಗಿರುವ ವೆಚ್ಚದಲ್ಲಿ ಬಿಜೆಪಿಯೊಂದೇ ಶೇ. 45 ರಷ್ಟು ಖರ್ಚು ಮಾಡಿದೆ.ಅದರಲ್ಲಿ ಒಂದು ಮತಕ್ಕೆ 700 ರು ವೆಚ್ಚವಾಗಿದೆ, 
ಒಂದು ಕ್ಷೇತ್ರದಲ್ಲಿ 100 ಕೋಟಿ ರು ಖರ್ಚಾಗಿದೆ, ಹಣ ಪಡೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ.  ಅನುಭವಗಳು ಮತ್ತು ಅಂದಾಜುಗಳ ಆಧಾರದಲ್ಲಿ ವೆಚ್ಚದ ಲೆಕ್ಕ ಹಾಕಲಾಗಿದೆ, ಚುನಾವಣಾ ಆಯೋಗವು ದಿನಾಂಕ ಪ್ರಕಟಿಸುವುದಕ್ಕೆ ಮುಂಚೆ ಮಾಡಲಾದ ಜಾಹೀರಾತು ಮತ್ತು ಪ್ರಚಾರದ ವೆಚ್ಚ ಇದರಲ್ಲಿ ಸೇರಿಲ್ಲ. 
SCROLL FOR NEXT