ಕೊಚ್ಚಿ: ದೇವರನಾಡು ಕೇರಳದಲ್ಲಿ ಮಹಾಮಾರಿ ನಿಪಾಹ್ ಮತ್ತೆ ವಕ್ಕರಿಸಿದ್ದು, 23 ವರ್ಷದ ವ್ಯಕ್ತಿ ನಿಪಾಹ್ ವೈರಾಣು ಸೋಂಕಿಗೆ ತುತ್ತಾಗಿರುವುದು ಬೆಳಕಿಗೆ ಬಂದಿದೆ.
ಕೇರಳದ ಎರ್ನಾಕುಲಂ ಮೂಲದ ವ್ಯಕ್ತಿ ಕಳೆದ ವಾರ ತೀವ್ರ ಜ್ವರದಿಂದ ಬಳಲುತ್ತಿದ್ದ. ಆತನನ್ನು ಕೂಡಲೇ ಆಸ್ಪತ್ರೆ ದಾಖಲು ಮಾಡಲಾಗಿತ್ತು, ಆತನಲ್ಲಿನ ಲಕ್ಷಣಗಳನ್ನು ಗುರುತಿಸಿದ್ದ ವೈದ್ಯರು ನಿಪಾಹ್ ಸೋಂಕು ಇರಬಹುದು ಶಂಕಿಸಿದ್ದರು. ಹೀಗಾಗಿ ಅತನ ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ)ಗೆ ಕಳುಹಿಸಿದ್ದರು. ಇದೀಗ ಈ ರಕ್ತದ ಮಾದರಿಯ ವರದಿ ಬಂದಿದ್ದು, ವ್ಯಕ್ತಿಗೆ ನಿಪಾಹ್ ವೈರಾಣು ತಗುಲಿರುವುದು ವರದಿಯಿಂದ ಸ್ಪಷ್ಟವಾಗಿದೆ.
ಹೀಗಾಗಿ ಸೊಂಕಿತನನ್ನು ವಿಶೇಷ ಕೊಠಡಿಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.