ದೇಶ

ಸಸಿ ಜೊತೆಗೆ ಸೆಲ್ಫಿ ಪ್ರಚಾರಾಂದೋಲನಕ್ಕೆ ಪ್ರಕಾಶ್ ಜಾವಡೇಕರ್ ಚಾಲನೆ

Nagaraja AB

ನವದೆಹಲಿ: ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಸಸಿ ಜೊತೆಗೆ ಸೆಲ್ಫಿ ಪ್ರಚಾರಾಂದೋಲನಕ್ಕೆ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಚಾಲನೆ ನೀಡಿದ್ದು, ಒಂದು  ಸಸಿ ನೆಟ್ಟು ಅದರ ಜೊತೆಗೆ ಸೆಲ್ಫಿ ತೆಗೆದುಕೊಳ್ಳುವಂತೆ ಜನರಿಗೆ ಕರೆ ನೀಡಿದ್ದಾರೆ.

ಜನರ ಸಹಭಾಗಿತ್ವದಿಂದ ಪರಿಸರ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಬಹುದು, ಅದು ಜನಾಂದೋಲನವಾಗಬೇಕಿದೆ ಎಂದು ಶನಿವಾರವಷ್ಟೇ ಪರಿಸರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆಯಲ್ಲಿ ದೇಶದ ಜನರು ಉತ್ಸಾಹದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ. ಸಸಿ ನೆಟ್ಟು ಅದರ ಜೊತೆಗೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವಂತೆ ಅವರು ತಿಳಿಸಿದ್ದಾರೆ.

ಪರಿಸರ ಸರ್ಕಾರದ ಕಾರ್ಯಕ್ರಮವಲ್ಲ, ಆದರೆ, ಜನರ ಕಾರ್ಯಕ್ರಮ ಎಂಬುದರಲ್ಲಿ ಮೋದಿ ಸರ್ಕಾರ ನಂಬಿಕೆ ಹೊಂದಿದೆ ಎಂದು ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.ವಾಯು ಮಾಲಿನ್ಯ ಎಂಬ ಸಂದೇಶದೊಂದಿಗೆ ಚೀನಾ ವಿಶ್ವ ಪರಿಸರ ದಿನಾಚರಣೆ ಆಚರಿಸುತ್ತಿದೆ.

SCROLL FOR NEXT