ದೇಶ

ರಂಜಾನ್ ದಿನವೇ ಸೈನಿಕರತ್ತ ಕಲ್ಲು ತೂರಾಟ, ಉಗ್ರ ಝಾಕಿರ್ ಮುಸಾ, ಮಸೂದ್ ಅಜರ್ ಪರ ಘೋಷಣೆ!

Srinivasamurthy VN
ಶ್ರೀನಗರ: ದೇಶಾದ್ಯಂತ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬದ ಸಂಭ್ರಮದಲ್ಲಿ ತೊಡಗಿದ್ದರೆ ಅತ್ತ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಮಾತ್ರ ಸ್ಥಳೀಯ ಯುವಕರು ಸೈನಿಕರ ಮೇಲೆ ಕಲ್ಲು ತೂರಾಟ ಮಾಡುವ ಮೂಲಕ ರಂಜಾನ್ ಆಚರಣೆ ಮಾಡಿದ್ದಾರೆ.
ಹೌದು.. ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಈ ಘಟನೆ ನಡೆದಿದ್ದು, ರಂಜಾನ್ ಪ್ರಾರ್ಥನೆ ಬೆನ್ನಲ್ಲೇ ಕೆಲ ಕಿಡಿಗೇಡಿ ಯುವಕರು ಇಲ್ಲಿನ ಖ್ಯಾತ ಜಾಮಿಯಾ ಮಸೀದಿ ಬಳಿ ಸೇರಿ ದೇಶದ ವಿರುದ್ಧ ಘೋಷಣೆ ಕೂಗಿದ್ದಾರೆ. ಅಲ್ಲದೆ ಉಗ್ರ ಝಾಕಿರ್ ಮುಸಾ ಮತ್ತು ಮಸೂದ್ ಅಜರ್ ಸೇರಿದಂತೆ ಉಗ್ರ ಸಂಘಟನೆ ಪರ ಘೋಷಣೆಗಳನ್ನೂ ಕೂಗುತ್ತಾ ದೇಶದ್ರೋಹಿ ಪೋಸ್ಚರ್ ಗಳನ್ನು ಪ್ರದರ್ಶನ ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಸೈನಿಕರ ಮೇಲೂ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ, ಅಲ್ಲದೆ ದೇಶದ್ರೋಹಿ ಪೋಸ್ಟರ್ ಗಳನ್ನು ಪ್ರದರ್ಶನ ಮಾಡಿದ್ದಾರೆ ಎನ್ನಲಾಗಿದೆ.
ಸೈನಿಕರ ಮೇಲೆ ಕಲ್ಲು ತೂರಾಟ ಮಾಡುತ್ತಲೇ ಸೈನಿಕರು ಲಘು ಲಾಠಿ ಪ್ರಹಾರ ಮಾಡಿ ಕಿಡಿಗೇಡಿಗಳನ್ನು ಚದುರಿಸಿದ್ದಾರೆ ಎನ್ನಲಾಗಿದೆ. 
ಬಾರಾಮುಲ್ಲಾದಲ್ಲೂ ಸೇನೆ ವಿರುದ್ಧ ಪ್ರತಿಭಟನೆ 
ಇನ್ನು ಅತ್ತ ಬಾರಾಮುಲ್ಲಾ ಜಿಲ್ಲೆಯಲ್ಲೂ ಇಂತಹುದೇ ಘಟನೆ ಬೆಳಕಿಗೆ ಬಂದಿದ್ದು, ರಂಜಾನ್ ಪ್ರಾರ್ಥನೆ ಮುಕ್ತಾಯವಾದ ಬೆನ್ನಲ್ಲೇ ಕಿಡಿಗೇಡಿಗಳು ಸೇನೆ ವಿರುದ್ಧ ಘೋಷಣೆ ಕೂಗಿ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಭದ್ರತೆಗೆ ಆಗಮಿಸಿದ್ದ ಸೈನಿಕರ ಪೈಕಿ ಕೆಲವರಿಗೆ ಗಾಯಗಳಾಗಿವೆ ಎನ್ನಲಾಗಿದೆ. ಈ ಕುರಿತು ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
SCROLL FOR NEXT