ಸಾಂದರ್ಭಿಕ ಚಿತ್ರ 
ದೇಶ

ಗಗನ ಸಖಿ ಮೇಲೆ ಸಾಮೂಹಿಕ ಅತ್ಯಾಚಾರ?

ಖಾಸಗಿ ವಿಮಾನಯಾನ ಸಂಸ್ಥೆಯ 25 ವರ್ಷ ವಯಸ್ಸಿನ ಗಗನ ಸಖಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ಮುಂಬೈ: ಖಾಸಗಿ ವಿಮಾನಯಾನ ಸಂಸ್ಥೆಯ 25 ವರ್ಷ ವಯಸ್ಸಿನ ಗಗನ ಸಖಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಮುಂಬೈನ ಅಂಧೇರಿ ಉಪನಗರದಲ್ಲಿ ಈ ಘಟನೆ ನಡೆದಿದ್ದು, ಯುವತಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಆರೋಪಿಸಿ ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ದೂರುಸಲ್ಲಿಕೆ ಮಾಡಿದ್ದಾರೆ. 
ಯುವತಿ ನೀಡಿರುವ ದೂರಿನಲ್ಲಿ ಸ್ವಪ್ನಿಲ್ ಬಡೋಡಿಯಾ ಎಂಬಾತ ತನ್ನ ಸಹೋದ್ಯೋಗಿ ಹಾಗೂ ಸ್ನೇಹಿತನಾಗಿದ್ದು, ಕಳೆದ ಮಂಗಳವಾರ ರಾತ್ರಿ ತನ್ನ ಮನೆಗೆ ಡಿನ್ನರ್ ಗೆ ಅಹ್ವಾನಿಸಿದ್ದ. ಹೀಗಾಗಿ ಅಂದು ರಾತ್ರಿ ನಾನು ಗೋನಿ ನಗರದಲ್ಲಿರುವ ಆತನ ಫ್ಲಾಟ್ ಗೆ ತೆರಳಿದ್ದೆ. ಈ ವೇಳೆ ಊಟ ಮುಗಿಸಿ ಡ್ರಿಂಕ್ಸ್ ತೆಗೆದುಕೊಂಡಿದ್ದೆವು. ಆ ಬಳಿಕ ನಾನು ನಿದ್ರೆಗೆ ಜಾರಿದ್ದೆ. ಬೆಳಗ್ಗೆ ನನಗೆ ಎಚ್ಚರವಾದಾಗ ನಾನು ವಿವಸ್ತ್ರಳಾಗಿ ಬಿದ್ದಿದ್ದೆ. ನನ್ನ ಮೇಲೆ ಸ್ವಪ್ನಿಲ್ ಮತ್ತು ಆತನ ಸ್ನೇಹಿತರು ಬಲವಂತವಾಗಿ ತಮ್ಮ ಲೈಂಗಿಕ ತೃಷೆ ತೀರಿಸಿಕೊಂಡಿದ್ದರು ಎಂದು ಅಳಲು ತೋಡಿಕೊಂಡಿದ್ದಾರೆ.
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಎಂಐಡಿಸಿ ಪೊಲೀಸರು, ಸ್ವಪ್ನಿಲ್ ಮತ್ತು ಆತನ ಸ್ನೇಹಿತರ ವಿರುದ್ಧ ಐಪಿಸಿ ಸೆಕ್ಷನ್ 376 ಡಿ (ಸಾಮೂಹಿಕ ಅತ್ಯಾಚಾರ) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಪ್ರಮುಖ ಆರೋಪಿ ಸ್ವಪ್ನಿಲ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಾಥಮಿಕ ತನಿಖೆ ವೇಳೆ ಆತ ಯುವತಿ ಮೇಲೆ ಅತ್ಯಾಚಾರ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆಯಾದರೂ, ತನ್ನ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ಮಾಡಿದ್ದನ್ನು ನಿರಾಕರಿಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ನಿತಿನ್ ಅಲಕ್ನುರೆ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ'.. 'ನಿಮ್ಮನ್ನು ಈರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ'; Kichcha Sudeepಗೆ ಪತ್ರ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: ಉಲ್ಟಾ ಹೊಡೆದ Falahari Maharaj, ಕ್ಷಮೆಯಾಚನೆ! video

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!