ಶೌಚಾಲಯದಲ್ಲಿ ಗಾಂಧೀಜಿ ಚಿತ್ರವಿದ್ದ ಟೈಲ್ಸ್ ಬಳಕೆ:ಅಧಿಕಾರಿ ಅಮಾನತು 
ದೇಶ

ಶೌಚಾಲಯದಲ್ಲಿ ಗಾಂಧೀಜಿ ಚಿತ್ರವಿದ್ದ ಟೈಲ್ಸ್ ಬಳಕೆ: ಅಧಿಕಾರಿ ಅಮಾನತು

ಸ್ವಚ್ಚ ಭಾರತ ಅಭಿಯಾನದಡಿ ನಿರ್ಮಿಸಲಾಗಿದ್ದ ಶೌಚಾಯದ ಗೋಡೆಗಳ ಮೇಲೆ ಗಾಂಧೀಜಿ ಹಾಗೂ ಅಶೋಕ ಚಕ್ರಗಳ ಚಿತ್ರವಿರುವ ಟೈಲ್ಸ್ ಕಂಡುಬಂದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು ....

ಬುಲಂದರಷಹರ್: ಸ್ವಚ್ಚ ಭಾರತ ಅಭಿಯಾನದಡಿ ನಿರ್ಮಿಸಲಾಗಿದ್ದ ಶೌಚಾಯದ ಗೋಡೆಗಳ ಮೇಲೆ ಗಾಂಧೀಜಿ ಹಾಗೂ ಅಶೋಕ ಚಕ್ರಗಳ ಚಿತ್ರವಿರುವ ಟೈಲ್ಸ್ ಕಂಡುಬಂದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು ಘಟನೆಗೆ ಸಂಬಂಧಿಸಿ ಗ್ರಾಮೀಣಾಭಿವೃದ್ಧಿ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ. ಇಖ್ವಾರಿ ಗ್ರಾಮದ ಮುಖ್ಯಸ್ಥರಿಗೆ ಸಹ ನೋಟೀಸ್ ನೀಡಲಾಗಿದೆ.
ಶೌಚಾಲಯದ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.ಗ್ರಾಮಸ್ಥರು ಹೇಳುವಂತೆ ಗ್ರಾಮದ ಮುಖ್ಯಸ್ಥನ ಸೂಚನೆಯಂತೆ ಶೌಚಾಲಯಕ್ಕೆ ಈ ಟೈಲ್ಸ್ ಗಳನ್ನು ಬಳಸಲಾಗಿತ್ತು.
"ನಾವು ಅದರ ವಿರುದ್ಧ ದೂರು ನೀಡಿದಾಗ, ಉನ್ನತಾಧಿಕಾರಿಗಳ ತೀರ್ಮಾನದಂತೆಇದನ್ನು ನಿರ್ಮಿಸಲಾಗಿದೆ. ನಾವು ಇದರಲ್ಲಿ ಮಧ್ಯೆ ಪ್ರವೇಶಿಸಬಾರದೆಂದು ನಮಗೆ ತಿಳಿಸಲಾಗಿತ್ತು. ಆದರೆ ಶೌಚಾಲಯದ ವೀಡಿಯೋ  ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ನಂತರ ಕ್ರಮ ತೆಗೆದುಕೊಳ್ಳಲಾಗಿದೆ "ಅವರು ಹೇಳಿದರು.
ಪ್ರಾಥಮಿಕ ತನಿಖೆಯ ಬಳಿಕ ಗ್ರಾಮೀಣಾಭಿವೃದ್ಧಿಅಧಿಕಾರಿ ಸಂತೋಷ್ ಕುಮಾರ್ ಅವರನ್ನು ಅಮಾನತ್ತುಗೊಳಿಸಲಾಗಿದ್ದು ಗ್ರಾಮದ ಮುಖ್ಯಸ್ಥೆ ಸಾವಿತ್ರಿ ದೇವಿಗೆ ನೋಟೀಸ್ ನೀಡಲಾಗಿದೆ.
ಗ್ರಾಮದಲ್ಲಿ ನಿರ್ಮಿಸಿದ 13 ಶೌಚಾಲಯಗಳ ಗೋಡೆಗಳ ಮೇಲೆ ಗಾಂಧೀಜಿ ಹಾಗೂ ಅಶೋಕ ಚಕ್ರವಿರುವ ಟೈಲ್ಸ್ ಗಳನ್ನು ಬಳಸಲಾಗಿತ್ತು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.ಈ ಗ್ರಾಮದಲ್ಲಿ 508 ಶೌಚಾಲಯಗಳನ್ನು ಸ್ವಚ್ಚ ಬಾರತ್ ಅಭಿಯಾನದಡಿ ನಿರ್ಮಾಣ ಮಾಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

SCROLL FOR NEXT