ದೇಶ

ತೆಲಂಗಾಣದ ಈ ಗ್ರಾಮದ ರೈತ ಮಹಿಳೆಯರು ತಮ್ಮ ಬೈಕ್ ಮೇಲೆ ಜಮೀನು ಕೆಲಸಕ್ಕೆ ಹೋಗುತ್ತಾರೆ!

Lingaraj Badiger
ಜಗ್ತಿಯಾಲ್: ತೆಲಂಗಾಣದ ಒಂದು ಸಣ್ಣ ಹಳ್ಳಿ ಮಹಿಳಾ ಸಬಲೀಕರಣದಲ್ಲಿ ದೊಡ್ಡ ಕ್ರಾಂತಿಯೇ ಮಾಡಿದೆ. ಜಗ್ತಿಯಾಲ್ ದಿಂದ ಏಳು ಕಿ.ಮೀ. ದೂರದಲ್ಲಿರುವ ಲಕ್ಷ್ಮೀಪುರ ಗ್ರಾಮದಲ್ಲಿ ಮಹಿಳೆಯರು ತಮ್ಮ ವಿವಿಧ ಕೆಲಸಗಳಿಗೆ ತೆರಳಲು ಪುರುಷರ ಸಹಾಯಕ್ಕಾಗಿ ಕಾಯುವುದಿಲ್ಲ. ನಿತ್ಯ ತಮ್ಮದೇ ದ್ವಿಚಕ್ರ ವಾಹನವೇರಿ ಹೊಲಗಳಿಗೆ ಹೋಗಿ ಕೆಲಸ ಮಾಡಿ ಬರುತ್ತಾರೆ. ಅಲ್ಲದೆ ಇತರೆ ಮಹಿಳಾ ಕಾರ್ಮಿಕರಿಗೂ ತಮ್ಮ ವಾಹನದ ಮೇಲೆ ಕರೆದುಕೊಂಡು ಹೋಗುತ್ತಾರೆ.
ಲಕ್ಮೀಪುರದಲ್ಲಿ ಒಟ್ಟು 5 ಸಾವಿರ ಜನಸಂಖ್ಯೆ ಹೊಂದಿದ್ದು, 1200 ಕುಟುಂಬಗಳು ಕೃಷಿಯನ್ನು ಅವಲಂಭಿಸಿವೆ. ಇಲ್ಲಿ ಮಹಿಳೆಯರು ಸಹ ಕೃಷಿಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದು, ತಮ್ಮ ಸ್ಕೂಟಿಗಳ ಮೂಲಕ ಹೊಲಕ್ಕೆ ಹೋಗಿ ಕೆಲಸ ಮಾಡಿ ಬರುತ್ತಾರೆ ಮತ್ತು ಅದೇ ಸ್ಕೂಟಿಯಲ್ಲಿ ತರಕಾರಿಯನ್ನು ಜಗ್ತಿಯಾಲ್ ಮಾರುಕಟ್ಟೆಗೆ ಸಾಗಿಸುತ್ತಾರೆ.
ನಾನು ಮಹಿಳೆಯಾದರೂ ಪುರುಷರಂತೆ ಕಷ್ಟಪಟ್ಟು ಕೆಲಸ ಮಾಡುತ್ತೇನೆ ಮತ್ತು ಯಾವುದಕ್ಕೂ ನಾನು ಪುರುಷರನ್ನು ಅವಲಂಭಿಸುವುದಿಲ್ಲ. ಸಮಯ ಉಳಿಸುವುದಕ್ಕಾಗಿ ಸ್ಕೂಟಿಯನ್ನು ಬಳಸುತ್ತಿರುವುದಾಗಿ ಎಸ್ ಸರಿತಾ ಎಂಬ ರೈತ ಮಹಿಳೆ ಹೇಳುತ್ತಾರೆ.
ಈ ಸಣ್ಣ ಗ್ರಾಮದಲ್ಲಿ 70 ಕ್ಕೂ ಹೆಚ್ಚು ರೈತ ಮಹಿಳೆಯರು ಸ್ಕೂಟಿಯಲ್ಲೇ ಹೊಲಕ್ಕೆ ತೆರಳುತ್ತಾರೆ. ಇದು ನೋಡಲು ತುಂಬಾ ಅದ್ಭೂತವಾಗಿರುತ್ತದೆ. ಈ ಗ್ರಾಮದಲ್ಲಿ ರೈತರು, ಭತ್ತ, ಅರಿಶಿಣ, ಶುಂಠಿ, ಬಾಳೆಹಣ್ಣು, ಕಡಲೆಕಾಯಿ ಮತ್ತು ತರಕಾರಿಗ ಬೆಳೆಯುತ್ತಾರೆ. ಇಲ್ಲಿ ಟೊಮ್ಯಾಟೊ ಹೆಚ್ಚಾಗಿ ಬೆಳೆಯುತ್ತಾರೆ.
SCROLL FOR NEXT