ದೇಶ

ಎನ್ ಸಿಆರ್: ವಿದೇಶಿಗನೆಂದು ಘೋಷಿಸಲಾಗಿದ್ದ ಕಾರ್ಗಿಲ್ ಯುದ್ಧದ ಸೇನಾನಿ ಬಂಧಮುಕ್ತ!

Srinivas Rao BV
ಗುವಾಹಟಿ: ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದ ಯೋಧ ಮೊಹಮ್ಮದ್ ಸನಾವುಲ್ಲಾ ಅವರನ್ನು ಬಂಧಮುಕ್ತಗೊಳಿಸಲಾಗಿದೆ. 
ಅಸ್ಸಾಂ ನ ನ್ಯಾಯಾಧಿಕರಣ ಕಳೆದ ತಿಂಗಳು ಕಾರ್ಗಿಲ್ ಸೇನಾನಿಯನ್ನು ವಿದೇಶಿಗ ಎಂದು ಘೋಷಿಸಿತ್ತು. ಈಗ ಗುವಾಹಟಿ ಹೈಕೋರ್ಟ್ ಸನಾವುಲ್ಲಾಗೆ ಜಾಮೀನು ನೀಡಿದ ನಂತರ ಯೋಧನನ್ನು ಬಂಧಮುಕ್ತಗೊಳಿಸಲಾಗಿದೆ. 
ಸನಾವುಲ್ಲಾಗೆ ಕಾಮರೂಪ ಜಿಲ್ಲೆಯನ್ನು ತೊರೆಯದಂತೆ ಕೋರ್ಟ್ ಸೂಚನೆ ನೀಡಿದೆ. ಇದೇ ವೇಳೆ ಕೋರ್ಟ್ ಕೇಂದ್ರ ಸರ್ಕಾರ, ಅಸ್ಸಾಂ ಸರ್ಕಾರ, ಬೋಕೋನಲ್ಲಿರುವ ವಿದೇಶಿ ಟ್ರಿಬ್ಯುನಲ್, ಎನ್ ಆರ್ ಸಿ ಅಧಿಕಾರಿಗಳು ಹಾಗೂ ಎನ್ ಆರ್ ಸಿ ಪ್ರಕ್ರಿಯೆ ವೇಳೆ ಸನಾವುಲ್ಲ ಅವರ ದಾಖಲೆಗಳನ್ನು ಪರಿಶೀಲಿಸಿದ್ದ ಅಧಿಕಾರಿಗಳಿಗೆ ಕೋರ್ಟ್ ನೊಟೀಸ್ ಜಾರಿಗೊಳಿಸಿದೆ. 
ಎನ್ ಆರ್ ಸಿ ಪ್ರಕ್ರಿಯೆ ವೇಳೇ ನಿವೃತ್ತ ಯೋಧ ಸನಾವುಲ್ಲಾ ಅವರನ್ನು ವಿದೇಶಿಗ ಎಂದು ಘೋಷಿಸಿ ಗೋವಾಲ್ಪಾರದಲ್ಲಿನ ಡಿಟೆನ್ಷನ್ ಕೇಂದ್ರಕ್ಕೆ ಕಳಿಸಲಾಗಿತ್ತು. 2017 ರಲ್ಲಿ ನಿವೃತ್ತರಾಗಿದ್ದ ಯೋಧ ಸನಾವುಲ್ಲಾಗೆ 2014 ರಲ್ಲೇ ರಾಷ್ಟ್ರಪತಿ ಪದಕವೂ ದೊರೆತಿತ್ತು. 
SCROLL FOR NEXT