ದೇಶ

ಈ ವರ್ಷ ವೈದ್ಯಕೀಯ ಕಾಲೇಜುಗಳಲ್ಲಿ 4,500ಕ್ಕೂ ಅಧಿಕ ಎಂಬಿಬಿಎಸ್ ಸೀಟುಗಳ ಹೆಚ್ಚಳ

Sumana Upadhyaya
ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವೈದ್ಯಕೀಯ ಪದವಿ ಶಿಕ್ಷಣ ಕೋರ್ಸ್ ನ ಸಂಖ್ಯೆ 4,500ಕ್ಕಿಂತಲೂ ಹೆಚ್ಚಾಗಿದೆ.ಇಲ್ಲಿಯವರೆಗೆ ವೈದ್ಯಕೀಯ ಕೋರ್ಸ್ ಗಳ ಸೀಟುಗಳ ಸಂಖ್ಯೆ ಹೆಚ್ಚಾಗಿರುವುದು ಇದೇ ಮೊದಲ ಬಾರಿ.
ಈ ವರ್ಷ ವೈದ್ಯಕೀಯ ಕೋರ್ಸ್ ಗಳಿಗೆ ಒಟ್ಟು 74 ಸಾವಿರದ 215 ವಿದ್ಯಾರ್ಥಿಗಳು ಪ್ರವೇಶ ಸಿಗಲಿದೆ. ಅವುಗಳಲ್ಲಿ ಸರ್ಕಾರಿ ಕಾಲೇಜುಗಳಲ್ಲಿ 36 ಸಾವಿರದ 22 ಸೀಟುಗಳಿವೆ. ಕಳೆದ ವರ್ಷ ಒಟ್ಟು ಸೀಟುಗಳ ಸಂಖ್ಯೆ 69 ಸಾವಿರದ 712. 
ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಬೋರ್ಡ್ ಆಫ್ ಗವರ್ನರ್ಸ್ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಲ್ಲಿಸಿದ ಅಂಕಿಅಂಶ ಪತ್ರಿಕೆಗೆ ಲಭ್ಯವಾಗಿದ್ದು, 33 ಹೊಸ ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ಸಿಕ್ಕಿದೆ. ಇವುಗಳಲ್ಲಿ ಬಹುತೇಕ ಜಿಲ್ಲಾಸ್ಪತ್ರೆಗಳನ್ನು ಬೋಧನಾ ಕೇಂದ್ರಗಳಾಗಿ ಉನ್ನತ ದರ್ಜೆಗೇರಿಸಲಾಗುತ್ತದೆ.
ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಕೋಟಾದಡಿ ಈ ವರ್ಷ ಹೆಚ್ಚಿನ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಸೀಟುಗಳನ್ನು ನೀಡಲಾಗುತ್ತಿದೆ. 
SCROLL FOR NEXT