ದೇಶ

ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ: ಕೊಯಂಬತ್ತೂರಿನ ಏಳು ಕಡೆಗಳಲ್ಲಿ ಎನ್ಐಎ ದಾಳಿ

Sumana Upadhyaya
ಕೊಯಂಬತ್ತೂರು: ಕಳೆದ ಏಪ್ರಿಲ್ ನಲ್ಲಿ ಶ್ರೀಲಂಕಾದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಪಟ್ಟಂತೆ ಮಹತ್ವದ ಸುಳಿವು ಪತ್ತೆಗೆ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಅಧಿಕಾರಿಗಳ ಕೊಚ್ಚಿ ತಂಡ ಬುಧವಾರ ಬೆಳಗ್ಗೆಯೇ ನಗರದ ಏಳು ಕಡೆಗಳಲ್ಲಿ ಶೋಧ ಕಾರ್ಯ ನಡೆಸಿದೆ.
ಶ್ರೀಲಂಕಾದ ಕೊಲಂಬೊದಲ್ಲಿ ಚರ್ಚ್ ಮತ್ತು ಹೊಟೇಲ್ ಗಳ ಮೇಲೆ ನಡೆಸಿದ ದಾಳಿಯ ಮಾಸ್ಟರ್ ಮೈಂಡ್ ರಾಷ್ಟ್ರೀಯ ಥೋಹೀದ್ ಜಮಾತ್ (ಎನ್ ಟಿಜೆ) ನಾಯಕ ಜಹ್ರನ್ ಹಶೀಮ್ ಗೂ ಕೊಚ್ಚಿ ನಗರಕ್ಕೂ ಸಂಬಂಧವಿರಬಹುದು ಎಂಬ ಶಂಕೆಯಲ್ಲಿ ಶೋಧ ಕಾರ್ಯ ನಡೆಸಲಾಗಿದೆ.
ಎನ್ಐಎ ಅಧಿಕಾರಿಗಳ ತಂಡ ಪ್ರತ್ಯೇಕವಾಗಿ ಇಂದು ಬೆಳಗ್ಗೆ ಕೊಯಂಬತ್ತೂರು ನಗರ ಪೊಲೀಸರ ಸಹಾಯದಿಂದ ಆಗಮಿಸಿದರು.ಕೊಯಂಬತ್ತೂರಿನ ಪೊದನೂರು, ಉಕ್ಕಡಮ್ ಮತ್ತು ಕುನಿಯಮುತ್ತೂರುಗಳ ವಿವಿಧ ಕಡೆಗಳಲ್ಲಿ ಅಧಿಕಾರಿಗಳ ತಂಡ ಶೋಧ ನಡೆಸಿದರು. ಶಂಕಿತರ ಮನೆಗಳಲ್ಲಿ ಶೋಧ ನಡೆಸಿದರು.
ಎನ್ಐಎ ಅಧಿಕಾರಿಗಳು ಸದಾಮ್, ಅಕ್ಬರ್ ಮತ್ತು ಅಕ್ರಮ್ ಜಿಂತಾ ಅವರಿಗೆ ಸೇರಿದ ಪೊದನೂರಿನಲ್ಲಿನ ನಿವಾಸಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯ ಜೊತೆಗೆ ಸಂಬಂಧ ಹೊಂದಿ ಶ್ರೀಲಂಕಾ ಬಾಂಬ್ ದಾಳಿ ಜೊತೆ ಸಂಪರ್ಕವಿದೆಯೇ ಎಂದು ಅಧಿಕಾರಿಗಳ ತಂಡ ಪರಿಶೀಲಿಸುತ್ತಿದೆ.
SCROLL FOR NEXT