ದೇಶ

ಪ್ರಾದೇಶಿಕ ಭಾಷೆಗಳಲ್ಲಿ ಸೀರಿಯಲ್ ಶೀರ್ಷಿಕೆ ಪ್ರಸಾರ ಕಡ್ಡಾಯ- ಕೇಂದ್ರದ ಆದೇಶ

Nagaraja AB
ನವದೆಹಲಿ: ಭಾರತೀಯ ಭಾಷೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ  ಎಲ್ಲಾ ಖಾಸಗಿ ಟಿವಿ ಚಾನೆಲ್ ಗಳು ಸೀರಿಯಲ್ ಹಾಗೂ ಕಾರ್ಯಕ್ರಮದ ಶೀರ್ಷಿಕೆಯನ್ನು ಪ್ರಾದೇಶಿಕ ಭಾಷೆಗಳಲ್ಲಿ ಕಡ್ಡಾಯವಾಗಿ ಪ್ರಸಾರ ಮಾಡುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ. 
ಈ ಆದೇಶವನ್ನು ಸಿನಿಮಾಗಳಿಗೂ ವಿಸ್ತರಿಸಲು ಸರ್ಕಾರ ಯೋಚಿಸುತ್ತಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಕಾರ್ಯಕ್ರಮದ ಮೊದಲ ಅಥವಾ ಅಂತಿಮ ಭಾಗದಲ್ಲಿ ಶೀರ್ಷಿಕೆ ಅನೇಕ ಸಂದರ್ಭಗಳಲ್ಲಿ ಇಂಗ್ಲೀಷ್ ನಲ್ಲಿ ಪ್ರಸಾರವಾಗುತ್ತಿದೆ. ಭಾರತೀಯ ಭಾಷೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಾದೇಶಿಕ ಭಾಷೆಗಳಲ್ಲಿಯೂ ಶೀರ್ಷಿಕೆಯನ್ನು ಪ್ರಸಾರ ಮಾಡುವಂತೆ ಎಲ್ಲಾ ಖಾಸಗಿ ಟಿವಿ ಚಾನೆಲ್ ಗಳಿಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇಂಗ್ಲೀಷ್ ನಲ್ಲಿ ಶೀರ್ಷಿಕೆ ಪ್ರಸಾರ ಅವರಿಗೆ ಬಿಟ್ಟ ವಿಚಾರ. ಆದರೆ, ಕಡ್ಡಾಯವಾಗಿ ಪ್ರಾದೇಶಿಕ ಭಾಷೆಗಳಲ್ಲಿ ಶೀರ್ಷಿಕೆ ಪ್ರಸಾರ ಮಾಡಬೇಕೆಂದು ಜಾವಡೇಕರ್ ತಿಳಿಸಿದರು.
ಭಾರತೀಯ ಭಾಷೆಗಳಿಗೆ ಪ್ರೋತ್ಸಾಹ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನೀತಿಯಾಗಿದೆ. ಇದರ  ಜೊತೆಗೆ ಜನರಿಗೂ ಸುಲಭವಾಗಿ ಅರ್ಥವಾಗಬೇಕಿದೆ ಎಂದು ಹೇಳಿದರು.
SCROLL FOR NEXT