ದೇಶ

'ಬಸ್ ಡೇ' ಸೆಲೆಬ್ರೇಷನ್ ಮಾಡಲು ಹೋಗಿ ನಗೆಪಾಟಲಿಗೀಡಾದ ಚೆನ್ನೈ ವಿದ್ಯಾರ್ಥಿಗಳು!

Srinivasamurthy VN
ಚೆನ್ನೈ: ತಮಿಳುನಾಡಿನಲ್ಲಿ ನಿನ್ನೆ ನಡೆದ ಬಸ್ ಡೇ ಆಚರಣೆ ವಿದ್ಯಾರ್ಥಿಗಳ ಎಡವಟ್ಟಿನಿಂದಾಗಿ ದೇಶಾದ್ಯಂತ ನಗೆಪಾಟಲಿಗೀಡಾಗಿದೆ.
ಹೌದು.. ನಿನ್ನೆ ತಮಿಳುನಾಡಿನಾದ್ಯಂತ ಸರ್ಕಾರ ಬಸ್ ಡೇ ಆಚರಣೆ ಮಾಡಿದ್ದು, ಆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಯಥೇಚ್ಛ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಎಷ್ಟರಮಟ್ಟಿಗೆ ಎಂದರೆ ಬಸ್ ನಲ್ಲಿ ಜಾಗವಿಲ್ಲವೇನೋ ಎಂಬಂತೆ ಬಸ್ ಗಳ ಟಾಪ್ ಮೇಲೆ ಕುಳಿತು ಪ್ರಾಣವನ್ನು ಅಪಾಯಕ್ಕೆ ಒಡ್ಡಿ ಪ್ರಯಾಣ ಮಾಡಿದ್ದಾರೆ.
ಆದರೆ ವಿದ್ಯಾರ್ಥಿಗಳ ಇದೇ ಎಡವಟ್ಟು ಇದೀಗ ದೇಶಾದ್ಯಂತ ನಗೆಪಾಟಲಿಗೀಡಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳ ಎಡವಟ್ಟು ವ್ಯಾಪಕವಾಗಿ ಹರಿದಾಡುತ್ತಿದೆ. 
ಎಷ್ಟಕ್ಕೂ ಏನಾಯಿತು?
ಬಸ್ ಡೇ ದಿನಾಚರಣೆ ನಿಮಿತ್ತ ತಮಿಳುನಾಡು ಸಾರಿಗೆ ಇಲಾಖೆ ಸರ್ಕಾರಿ ಬಸ್ ಗಳ ಪ್ರಯಾಣವನ್ನು ಉತ್ತೇಜಿಸುವಂತೆ ಅಭಿಯಾನ ಹಮ್ಮಿಕೊಂಡಿತ್ತು. ಇದಕ್ಕೆ ವಿದ್ಯಾರ್ಥಿಗಳಿಂದ ವ್ಯಾಪಕ ಬೆಂಬಲ ಕೂಡ ವ್ಯಕ್ತವಾಗಿತ್ತು. ಆದರೆ ಇದನ್ನೇ ತಮ್ಮ ಕುಚೇಷ್ಟೆಗೆ ಬಳಸಿಕೊಂಡ ಕೆಲ ಕಿಡಿಗೇಡಿ ವಿದ್ಯಾರ್ಥಿಗಳು ಬಸ್ ಪ್ರಯಾಣದ ವೇಳೆ ದುಸ್ಸಾಹಸಕ್ಕೆ ಕೈಹಾಕಿದ್ದಾರೆ. ಬಸ್ ಗಳ ಫುಟ್ ಬೋರ್ಡ್ ನಲ್ಲಿ ನಿಂತು, ಅಪಾಯಕಾರಿಯಾಗಿ ನಿಲ್ಲುತ್ತಿದ್ದುದ್ದು, ಜೋರಾಗಿ ಕಿರುಚಿ ಇತರರಿಗೆ ತೊಂದರೆ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು.
ಅಲ್ಲದೆ ಬಸ್ ಗಳ ಟಾಪ್ ಮೇಲೆ ಕುಳಿತು ಅಪಾಯಕಾರಿಯಾಗಿ ಕುಳಿತು ಪ್ರಯಾಣಿಸುವಾಗ ಕೆಳಗೆ ಬಿದ್ದು ಇದೀಗ ಸುದ್ದಿಯಾಗಿದ್ದಾರೆ. ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಬಸ್ ಗಳ ಫುಟ್ ಬೋರ್ಡ್ ನಲ್ಲಿ ಮತ್ತು ಬಸ್ ಗಳ ಟಾಪ್ ಮೇಲೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ 24 ವಿದ್ಯಾರ್ಥಿಗಳನ್ನು ವಶಕ್ಕೆ ಕೂಡ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
SCROLL FOR NEXT