ದೇಶ

ಎನ್ಸಿಫಾಲಿಟೀಸ್ ಸೋಂಕು: ಮತ್ತೆ ಮೂರು ಮಕ್ಕಳ ಸಾವು, ಸಾವಿನ ಸಂಖ್ಯೆ 141ಕ್ಕೆ ಏರಿಕೆ

Srinivasamurthy VN
ಪಾಟ್ನಾ: ಬಿಹಾರದಲ್ಲಿ ಎನ್ಸಿಫಾಲಿಟೀಸ್ ಸೋಂಕು ಮರಣ ಮೃದಂಗ ಮುಂದುವರೆದಿದ್ದು, ಇಂದು ಮತ್ತೆ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಆ ಮೂಲಕ ಸಾವಿನ ಸಂಖ್ಯೆ 141ಕ್ಕೆ ಏರಿಕೆಯಾಗಿದೆ.
ಮೆದುಳು ಸಂಬಂಧಿತ ಖಾಲೆಗೆ ಬಿಹಾರದಲ್ಲಿ ಮಕ್ಕಳ ಸಾವಿನ ಸರಣಿ ಮುಂದುವರೆದಿದ್ದು, ಇಂದು ಮುಜಾಫರ್ ಪುರದಲ್ಲಿ ಮತ್ತೆ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಆ ಮೂಲಕ ಸಾವಿನ ಸಂಖ್ಯೆ 141ಕ್ಕೆ ಏರಿಕೆಯಾಗಿದ್ದು, ಈ ಪೈಕಿ 85 ಮಕ್ಕಳು ಸೇರಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಮಾರಣಾಂತಿಕ ಎನ್ಸಿಫಾಲಿಟೀಸ್ ಸೋಂಕು ಬಿಹಾರದ ಒಟ್ಟು 18 ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದ್ದು, ಮುಜಾಫರ್ ಪುರ ಜಿಲ್ಲೆಯೊಂದರಲ್ಲೇ 437 ಪ್ರಕರಣಗಳು ಕಂಡುಬಂದಿವೆ ಎಂದು ಕೇಂದ್ರೀಯ ಆರೋಗ್ಯ ಇಲಾಖೆ ತಂಡದ ಅಧಿಕಾರಿ ಮನೋಜ್ ಜಲಾನಿ ಮಾಹಿತಿ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ ಎನ್ಸಿಫಾಲಿಟೀಸ್ ಸಾವು ಪ್ರಕರಣ
ಇನ್ನು ಬಿಹಾರದಲ್ಲಿ ಸಾವಿನ ಸರಣಿ ಮುಂದುವರೆದಿರುವಂತೆಯೇ ಅತ್ತ ದೆಹಲಿಯಲ್ಲಿ ರಾಜ್ಯಸಭೆ ಕಲಾಪದಲ್ಲೂ ಎನ್ಸಿಫಾಲಿಟೀಸ್ ಸಾವು ಪ್ರಕರಣ ಪ್ರತಿಧ್ವನಿಸಿದೆ. ಕೂಡಲೇ ಸರಣಿ ಸಾವು ಪ್ರಕರಣದಲ್ಲಿ ಸರ್ಕಾರ ಮಧ್ಯ ಪ್ರವೇಶಿಸಬೇಕು ಮತ್ತು ಸಂತ್ರಸ್ಥ ಕುಟುಂಬಸ್ಥರಿಗೆ ಪರಿಹಾರ ಧನ ಘೋಷಣೆ ಮಾಡಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ.
SCROLL FOR NEXT