ದೇಶ

ಮಾಯಾವತಿಯಿಂದ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ದುರ್ಬಲ: ಮೈತ್ರಿ ಮುರಿದ ಬಳಿಕ ಎಸ್ಪಿ

Lingaraj Badiger
ಬಲ್ಲಿಯಾ: ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಬಿಎಸ್ ಪಿ ಏಕಾಂಕಿಯಾಗಿ ಸ್ಪರ್ಧಿಸಲಿದೆ ಎಂದು ಬಿಎಸ್ ಪಿ ನಾಯಕಿ ಮಾಯಾವತಿ ಅವರ ನಿರ್ಧಾರದಿಂದ 'ಸಾಮಾಜಿಕ ನ್ಯಾಯಕ್ಕಾಗಿ' ನಮ್ಮ ಹೋರಾಟ ದುರ್ಬಲಗೊಳ್ಳಲಿದೆ ಎಂದು ಸಮಾಜವಾದಿ ಪಕ್ಷದ ನಾಯಕ ರಾಮಶಂಕರ್ ವಿದ್ಯಾರ್ಥಿ ಅವರು ಹೇಳಿದ್ದಾರೆ.
ಮಾಯಾವತಿ ಅವರು ಇಂದು ಬೆಳಗ್ಗೆ, ಬಿಎಸ್ ಪಿ ಉಪ ಚುನಾವಣೆ ಸೇರಿದಂತೆ ಮುಂದಿನ ಎಲ್ಲಾ ಚುನಾವಣೆಗಳಲ್ಲೂ ನಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಘೋಷಿಸುವ ಮೂಲಕ ಲೋಕಸಭೆ ಚುನಾವಣೆಗೂ ಮುನ್ನ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಜೊತೆಗಿನ ಮೈತ್ರಿ ಮುರಿದುಕೊಂಡಿದ್ದರು.
ದಲಿತರು ಸಮಾಜವಾದಿ ಪಕ್ಷ ಮತ್ತು ಅಖಿಲೇಶ್ ಯಾದವ್ ಅವರಿಗೆ ಬೆಂಬಲ ನೀಡುತ್ತಿರುವುದರಿಂದ ಮಾಯಾವಾತಿ ಅವರು ನಮ್ಮ ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ. ಅವರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ವಿದ್ಯಾರ್ಥಿ ವರದಿಗಾರರಿಗೆ ತಿಳಿಸಿದ್ದಾರೆ.
ದಲಿತ ಸಮಾಜ ಅಖಿಲೇಶ್ ಯಾದವ್ ಅವರಿಗೆ ದೊಡ್ಡ ಮೊಟ್ಟದ ಬೆಂಬಲ ನೀಡುತ್ತಿದ್ದಾರೆ. ಯಾವುದು ನಿಜ ಮತ್ತು ಯಾವುದು ಸುಳ್ಳು ಎಂಬುದು ಜನತೆಗೆ ಅರ್ಥವಾಗುತ್ತದೆ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ವಿದ್ಯಾರ್ಥಿ ಹೇಳಿದ್ದಾರೆ.
"ಇತ್ತೀಚೆಗಿನ ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಭಿನ್ನಾಭಿಪ್ರಾಯ ಬದಿಗಿಟ್ಟು ಮೈತ್ರಿ ಧರ್ಮ ಪಾಲಿಸಿದ್ದೆವು. 2012-17ರ ಅವಧಿಯಲ್ಲಿ ಎಸ್​​ಪಿ ಸರ್ಕಾರ ತೆಗೆದುಕೊಂಡಿದ್ದ ದಲಿತ ವಿರೋಧಿ ನಿರ್ಧಾರಗಳನ್ನು ಪಕ್ಕಕಿಟ್ಟು ಬಿಜೆಪಿ ಸೋಲಿಸಲು ಮುಂದಾಗಿದ್ದೆವು. ಆದರೀಗ, ಲೋಕಸಭಾ ಚುನಾವಣೆ ಬಳಿಕ ಎಸ್​​ಪಿ ವರ್ತನೆಯಿಂದಾಗಿ ನಮಗೆ ಭಾರೀ ಬೇಸರವಾಗಿದೆ. ಹೀಗಾದರೆ ಬಿಜೆಪಿ ಸೋಲಿಸಲು ಅಸಾಧ್ಯ ಎಂಬುದು ಅರಿವಾಗಿದೆ. ಈ ಕಾರಣಕ್ಕೆ ಪಕ್ಷದ ಹಿತದೃಷ್ಟಿಯಿಂದ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಬಿಎಸ್​​ಪಿ ಏಕಾಂಗಿಯಾಗಿ ಬಿಜೆಪಿ ವಿರುದ್ಧ ಹೋರಾಡಲಿದೆ" ಎಂದು ಟ್ವೀಟ್​​ ಮೂಲಕ ಮಾಯಾವತಿ ಘೋಷಿಸಿದ್ದಾರೆ.
SCROLL FOR NEXT