ದೇಶ

ರೇಪ್- ಕೊಲೆ ಅಪರಾಧಿ ರಾಮ್ ರಹೀಮ್ ಪೆರೋಲ್ ಪರ ಹರ್ಯಾಣ ಬಿಜೆಪಿ ಸಚಿವನ ಹೇಳಿಕೆ!

Srinivas Rao BV
ಹರ್ಯಾಣ: ಅತ್ಯಾಚಾರ- ಕೊಲೆ ಪ್ರಕರಣಗಳಲ್ಲಿ ಅಪರಾಧಿಯಾಗಿ ಜೈಲು ಪಾಲಾಗಿರುವ ಗುರ್ಮಿತ್ ರಾಮ್ ರಹೀಮ್ ಪೆರೋಲ್ ಪರವಾಗಿ ಹರ್ಯಾಣ ಸಚಿವರು ಹೇಳಿಕೆ ನೀಡಿದ್ದಾರೆ. 
ಹರ್ಯಾಣದಲ್ಲಿ ಬಿಜೆಪಿ ಸರ್ಕಾರವಿದ್ದು, ಕ್ಯಾಬಿನೆಟ್ ಸಚಿವ ಅನಿಲ್ ವಿಜ್ ಮಾಧ್ಯಮವೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ, ಜೈಲಿನಲ್ಲಿ ತಮ್ಮ ಸನ್ನಡತೆಯನ್ನು ತೋರಿ ಪೆರೋಲ್ ಪಡೆಯುವುದು ಗುರ್ಮಿತ್ ರಾಮ್ ರಹೀಮ್ ಹಕ್ಕು ಎಂದು ಹೇಳಿದ್ದಾರೆ. 
ರಾಮ್ ರಹೀಮ್ ತಮ್ಮ ಪಂಥದ ಮುಖ್ಯಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು 42 ದಿನಗಳ ಪೆರೋಲ್ ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸಚಿವ ಪೆರೋಲ್ ಪಡೆಯುವುದು ರಾಮ್ ರಹೀಮ್ ಹಕ್ಕು ಎಂದು ಹೇಳಿದ್ದಾರೆ. 
ಬಂಧಿಖಾನೆ ಸಚಿವ ಕೆ.ಎಲ್ ಪನ್ವಾರ್ ಮಾತನಾಡಿದ್ದು, ರಾಮ್ ರಹೀಮ್ ಪೆರೋಲ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅದನ್ನು ಸಿರ್ಸಾ ಜಿಲ್ಲಾಡಳಿತಕ್ಕೆ ಕಳಿಸಲಾಗಿದೆ. ಅಲ್ಲಿಂದ ವರದಿ ಬಂದ ನಂತರ ಪೆರೋಲ್ ನೀಡುವ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಹೇಳಿದ್ದಾರೆ. 
ರಾಮ್ ರಹೀಮ್ ನ್ನು ಪೆರೋಲ್ ಆಧಾರದಲ್ಲಿ ಹೊರಬಿಟ್ಟರೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಜಿಲ್ಲಾಡಳಿತ ಕೇಂದ್ರ ಭದ್ರತಾ ಮತ್ತು ಗುಪ್ತಚರ ಇಲಾಖೆಗಳಿಂದ ಪ್ರತಿಕ್ರಿಯೆ ನಿರೀಕ್ಷೆಯಲ್ಲಿದೆ. 
SCROLL FOR NEXT