ಮಾಡದ ತಪ್ಪಿಗೆ ಜೈಲು ಸೇರಿದ್ದ ಪುಟ್ಟ ಬಾಲಕಿಯನ್ನು ಶಾಲೆಗೆ ಸೇರಿಸಿ ಮಾನವೀಯತೆ ಮೆರೆದ ಕಲೆಕ್ಟರ್
ರಾಯ್ ಪುರ: ಒಬ್ಬ ಮಗಳು ತನ್ನ ತಂದೆಯೊಡನೆ ಎಂತಹಾ ಗಾಢ ಸಂಬಂಧ ಹೊಂದಿರುತ್ತಾಳೆಂದರೆ ಆತ ಎಂತಹವನಾದರೂ ತಂದೆಯ ಪ್ರೀತಿಯನ್ನು ಆಕೆ ಕಡೆಗಣಿಸಲಾರಳು. ಇದಕ್ಕೆ ಇತ್ತೀಚಿನ ಉದಾಹರಣೆಯಾಗಿ ಬಿಲಾಸ್ ಪುರ ಸೆಂಟ್ರಲ್ ಜೈಲಿನಲ್ಲಿ ನಡೆದ ಘಟನೆಯೇ ಸಾಕ್ಷಿ. ಬಿಲಾಸ್ಪುರ್ ಸೆಂಟ್ರಲ್ ಜೈಲಿನಲ್ಲಿ ಬಂಧಿಯಾಗಿರುವ ಆರೋಪಿ ತನ್ನ 6 ವರ್ಷದ ಮಗಳನ್ನು ತನ್ನಿಂದ ಬೇರಾಗಿ ಹೊಸ ಜೀವನ ಪ್ರಾರಂಭಿಸುವುದನ್ನು ಊಹಿಸಿಕೊಳ್ಲಲಾಗದೆ ದುಃಖತಪ್ತನಾಗಿದ್ದಾನೆ. ಬಿಲಾಸ್ಪುರ ಜಿಲ್ಲಾಧಿಕಾರಿ ಡಾ.ಸಂಜಯ್ ಅಳುಂಗ್ ಅವರ ಆಜ್ಞೆಯ ಮೇರೆನಗರದ ಅತ್ಯುತ್ತಮ ಖಾಸಗಿ ಶಾಲೆಗಳಲ್ಲಿ ಒಂದಕ್ಕೆ ಆರೋಪಿಯ ಮಗಳನ್ನು ದಾಖಲಿಸಲು ಮುಂದಾದಾಗ ಜೈಲು ಆವರಣದಲ್ಲಿ ಈ ಅಪರೂಪದ ಘಟನೆ ನಡೆದಿದೆ.
ಗಂಭೀರ ಅಪರಾಧಕ್ಕಾಗಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಆರೋಪಿ ತಂದೆ ಅವನ ಪುಟ್ಟ ಮಗಳು ಖುಷಿ(ಹೆಸರು ಬದಲಿಸಿದೆ) ಮೊದಲ ಬಾರಿಗೆ ಜೈಲಿನಾಚಿನ ಹೊಸ ಜಗತ್ತನ್ನು ಕಾಣುತ್ತಿದ್ದಾಳೆಂಬುದನ್ನು ಕಲ್ಪಿಸಿಕೊಳ್ಲಲು ಆಗುತ್ತಿಲ್ಲ. ಮತ್ತು ಆತನ ಪಾಲಿಗಿದು ಅತ್ಯಂತ ಖುಷಿಯ ಸಂಗತಿಯಾಗಿದೆ.
ಮಗು ಹುಟ್ಟಿದ 15 ದಿನಗಳಲ್ಲೇ ಆಕೆಯ ತಾಯಿ ಕಾಮಾಲೆ ರೋಗದಿಂದ ಮರಣಹೊಂದಿದಳು ಮತ್ತು ಅವನ ತಂದೆ ಅತ್ಯಾಚಾರದ ಆರೋಪದ ಮೇಲೆ ಜೈಲು ಸೇರಿದ್ದನು.ಆಗ ಬಾಲಕಿಯು ಜೈಲಿನೊಳಗೆ ವಾಸಿಸಬೇಕಾಯಿತು ಮತ್ತು ಅವಳನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಮಹಿಳಾ ಕೈದಿಗಳು ಅವಳನ್ನು ನೋಡಿಕೊಂಡರು.
ಹಿಂದಿನ ತಿಂಗಳು ತನ್ನ ಜೈಲು ತಪಾಸಣೆಯ ಸಮಯದಲ್ಲಿ, ಮಹಿಳಾ ಸೆಲ್ ಬ್ಯಾರೆಕ್ ನ ಒಂದು ಮೂಲೆಯಲ್ಲಿ ಹುಡುಗಿ ಸದ್ದಿಲ್ಲದೆ ಕುಳಿತಿದ್ದನ್ನು ಗಮನಿಸಿದ ಜಿಲ್ಲಾಧಿಕಾರಿ. ಈ ಸಣ್ಣ ಹುಡುಗಿಯನ್ನು ಕರೆದು ಮಾತನಾಡಿದ್ದಾರೆ. ಅವಳು ಮಾಡಿರದ ತಪ್ಪಿಗೆ ಆಕೆ ಜೈಲಿನಲ್ಲಿದ್ದಾಳೆ. ಇದನ್ನು ಕಂಡು ಆ ಅಧಿಕಾರಿಗೆ ಕರುಣೆ ಬಂದಿದ್ದು ಆಗ ಅವರು ತಡ ಮಾಡದೆ ಜೈಲಿನ ಅಧಿಕಾರಿಗಳಿಗೆ ಆ ಬಾಲಕಿಯನ್ನು ಜೈಲಿನಿಂದ ಹೊರತಂದು ಉತ್ತಮವಾಗಿರುವ ಶಾಲೆಗೆ ದಾಖಲಿಸುವಂತೆ ಆದೇಶಿಸಿದ್ದಾರೆ.
ಬಿಲಾಸ್ ಪುರ್ ಜಿಲ್ಲಾಧಿಕಾರಿಗಳು ತೆಗೆದುಕೊಂಡಿರುವ ಈ ಕ್ರಮಕ್ಕೆ ಬಾಲಕಿ ಖುಷಿ ಸಹ ಸಂತಸದಿಂದ ಸ್ಪಂದಿಸಿದ್ದಾಳೆ.ಅಲ್ಲದೆ ಖುಷಿಯೊಂದಿಗೆ ಜೈಲಿನಲ್ಲಿ ಅವಳದೇ ವಯಸ್ಸಿನ 17 ಮಕ್ಕಳಿದ್ದಾರೆ ಎಂದು ಆಕೆ ಮಾಹಿತಿ ಕೊಟ್ಟಿದ್ದಾಳೆ.
"ಪ್ರಸ್ತುತ ಶೈಕ್ಷಣಿಕ ವರ್ಷದಿಂದ ವರೆಲ್ಲರನ್ನು ಈಗ ಉತ್ತಮ ಶಾಲೆಗಳಲ್ಲಿ ಸೇರಿಸಲಾಗಿದೆ. ಈಗ ವಿವಿಧ ಸಂಸ್ಥೆಗಳು ಅವರಿಗೆ ಪದವಿ ತನಕವೂ ಉತ್ತಮ ಶಿಕ್ಷಣವನ್ನು ನಿಡಲು ಸಿದ್ದವಾಗಬೇಕು, ಹಾಸ್ಟೆಲ್‌ಗಳಲ್ಲಿ ಉಳಿದುಕೊಳ್ಳುವ ವೆಚ್ಚವನ್ನು ಭರಿಸುವುದು ಉತ್ತಮ" ಕಲೆಕ್ಟರ್ ಹೇಳಿದ್ದಾರೆ.
ಖುಷಿ ಮೊದಲ ದಿನ ಜೈಲಿನಿಂದ ಹೊರಬಂದು ಶಾಲೆಯತ್ತ ತೆರಳುವಾಗ ಅತ್ಯಂತ ಉತ್ಸುಕಳಾಗಿದ್ದಳು. ಕಲೆಕ್ಟರ್ ತಾವೇ ಸ್ವತಃಅ ಖುಷಿಯನ್ನು ಶಾಲೆಗೆ ಬಿಡಲು ತನ್ನ ಅಧಿಕೃತ ಕಾರಿನಲ್ಲಿ ಕರೆದೊಯ್ದನು. ಅವಳು ಪ್ರವೇಶ ಪಡೆದ ಜೈನ್ ಇಂಟರ್ನ್ಯಾಷನಲ್ ಶಾಲೆಯ ನಿರ್ದೇಶಕ ಅಶೋಕ್ ಅಗರ್ ವಾಲ್ ಖುಷಿಗೆ ಶಾಲೆಯ ಹಾಸ್ಟೆಲ್ನಲ್ಲಿ ಉಳಿದುಕೊಳ್ಳುವುದು ಸೇರಿದಂತೆ ಎಲ್ಲಾ ಖರ್ಚುಗಳನ್ನು ತನ್ನ ಸಂಸ್ಥೆ ಭರಿಸಲಿದೆ ಎಂದು ಹೇಳಿದರು. ತಾತ್ಕಾಲಿಕ ಆಧಾರದ ಮೇಲೆ, ಒಬ್ಬ ಉಸ್ತುವಾರಿಯನ್ನು ಸಹ ವ್ಯವಸ್ಥೆ ಮಾಡಲಾಗಿದೆ ಎಮ್ದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos